2019ಕ್ಕೆ ಹೊರಬರಲಿದೆ ಸ್ವಿಸ್ ಖಾತೆಧಾರರ ವಿವರ

ಸ್ವಿಸ್ ಖಾತೆಯಲ್ಲಿ ಭಾರತೀಯರು ಇಟ್ಟಿರುವ ಹಣದ ಮೊದಲ ಕಂತಿನ ವಿವರಗಳು 2019ರಲ್ಲಿ ಭಾರತ ಸರ್ಕಾರಕ್ಕೆ ಸಿಗಲಿದೆ ಎಂದು ಸ್ವಿಜರ್ಲೆಂಡ್ ಅಧ್ಯಕ್ಷೆ ಡೋರಿಸ್ ಲ್ಯೂಥರ್ಡ್ ಭರವಸೆ ನೀಡಿದ್ದಾರೆ.
ಇದೇ ವರ್ಷಾಂತ್ಯದಲ್ಲಿ ಸ್ವಿಸ್ ಸಂಸತ್ತು ಸ್ವಯಂ ಚಾಲಿತ ಮಾಹಿತಿ ವಿನಿಮಯ ಕಾನೂನನ್ನು ಅನುಮೋದಿಸುವ ಮೂಲಕ, ಭಾರತದ ಕಪ್ಪು ಹಣ ವಿರುದ್ಧದ ಹೋರಾಟಕ್ಕೆ ತಮ್ಮ ಸರ್ಕಾರ ಸಹಾಯ ಮಾಡಲಿದೆ ಎಂದು ಸ್ವಿಸ್ ಅಧ್ಯಕ್ಷೆ ಭರವಸೆ ನೀಡಿದ್ದಾರೆ.
ಅಕ್ರಮ ಹಣಕ್ಕೆ ಹಲವು ವರ್ಷಗಳಿಂದ ಸ್ವಿಜರ್ಲೆಂಡ್ ಸುರಕ್ಷಿತ ಸ್ಥಳವೆಂದು ಎಂದು ಹೇಳಲಾಗಿದ್ದು, ಕೆಲವು ಭಾರತೀಯರು ತಾವು ಸಂಪಾದಿಸಿದ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ ಎಂಬ ಚರ್ಚೆಗಳು ಭಾರತದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.
Comments