ಮೈಸೂರು ಪ್ರವಾಸಿಗರಿಗೆ ಸಿಹಿ ಸುದ್ದಿ. ಪ್ರವಾಸಿ ಸ್ಥಳಗಳನ್ನು ನೋಡಲು ಇನ್ಮುಂದೆ ಒಂದೇ ಟಿಕೆಟ್

ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಒಂದೇ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ. ಆನ್ಲೈನ್ ಮೂಲಕ ನಗರಕ್ಕೆ ಭೇಟಿ ನೀಡುವ ಮೊದಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.
ಮೈಸೂರು ಅರಮನೆ, ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿ ಬೆಟ್ಟ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್‌ಎಸ್ ಜಲಾಶಯವನ್ನು ವೀಕ್ಷಣೆ ಮಾಡಲು ಒಂದೇ ಟಿಕೆಟ್ ಜಾರಿಗೆ ತರಲಾಗುತ್ತದೆ.ಮೈಸೂರು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸುತ್ತಿವೆ. 2017ರ ದಸರಾ ಆರಂಭಕ್ಕೂ ಮುನ್ನ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.
2017ರ ದಸರಾ ಮುಗಿದ ಬಳಿಕ ಮೂರು ತಿಂಗಳ ಕಾಲ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಮುಂದುವರೆಸಲು ಜಿಲ್ಲಾಡಳಿತ ನಿರ್ಧರಿಸಿದೆ. BookMyShow ಜೊತೆ ಜಿಲ್ಲಾಡಳಿತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದಸರಾ, ವಾರಾಂಂತ್ಯದಲ್ಲಿ ಹೆಚ್ಚಿನ ಜನರು ಆಗಮಿಸುತ್ತಾರೆ. ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಪ್ರತ್ಯೇಕ ಟಿಕೆಟ್ ಪಡೆಯಬೇಕಾಗಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ಸಿಂಗಲ್ ಟಿಕೆಟ್ ಸಿಸ್ಟಮ್ ಅನ್ನು ಜಿಲ್ಲಾಡಳಿತ ಪರಿಚಯಿಸುತ್ತಿದೆ.
Comments