ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಮುಖ್ಯಮಂತ್ರಿ ಏಕವಚನ ಪ್ರಯೋಗ !!
ಮೈಸೂರು: ಮೈಸೂರು ರಾಜ ವಂಶಸ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನ ಪ್ರಯೋಗಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮೈಸೂರು ಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್ ನೇತೃತ್ವದ ಸದಸ್ಯರ ತಂಡದೊಂದಿಗೆ ಸಿಎಂ ಶಾರದಾದೇವಿನಗರದ ನಿವಾಸದಲ್ಲಿ ಚರ್ಚಿಸಿದರು. ಈ ವೇಳೆ ದೇವರಾಜ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು. ಅಲ್ಲಿ ವ್ಯಾಪಾರ ಮಾಡುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಜಾಗವನ್ನು ಕೊಟ್ಟಿದ್ದಾರೆ. ಎಂದು ಮೇಯರ್ ರವಿಕುಮಾರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವನು ರಾಜ, ಜನರ ಹಣದಿಂದ ಮಾರ್ಕೆಟ್ ಕಟ್ಟಿದ, ತನ್ನ ಸ್ವಂತ ದುಡ್ಡಿನಿಂದ ಅವನು ಖರ್ಚು ಮಾಡಿಲ್ಲ, ಅದು ಸರ್ಕಾರ. ಜನರದೇ ಆಸ್ತಿ. ಮಹಾರಾಜ ಎಂದರೆ ದೇವರಲ್ಲ. ಮಹಾರಾಜ ಕೊಡಲೇಬೇಕಿತ್ತು ಎಂದು ಹೇಳಿದ್ದಾರೆ.
ಈಗ ತಾವೇ ಮಹಾರಾಜರು ಎಂದು ಪಾಲಿಕೆ ಮಹಿಳಾ ಸದಸ್ಯೆಯೊಬ್ಬರು ಹೇಳಿದಾಗ ಇಲ್ಲ, ಇಲ್ಲ, ನಾನು ಮಹಾರಾಜ ಅಲ್ಲ. ಆಗ ಮಹಾರಾಜ ಮಾಡಿದ್ದೇ ವೇದವಾಕ್ಯ ನಾವು ಜನಪ್ರತಿನಿಧಿಗಳು ಹಾಗೆ ಮಾಡುವುದಕ್ಕೆ ಆಗುವುದಿಲ್ಲ, ಹಾಗೆ ಮಾಡಿದರೆ ಜನ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಮಹಾರಾಜರ ಬಗ್ಗೆ ಜನರಾಗಿ ಅಪಾರ ಗೌರವ ಇತ್ತು, ಯಾರೋಬ್ಬರು ಅವರನ್ನು ಪ್ರಶ್ನಿಸುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಿಡಿಯೋದಲ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Comments