ಸುನಂದಾ ಪುಷ್ಕರ್ ಸಾವು ಅಸಹಜ ಎಂದು ಹೇಳಿದ ದೆಹಲಿ ಹೈಕೋರ್ಟ್

ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ಅವರ ಸಾವು ಸಹಜವಾಗಿರಲಿಲ್ಲ ಎಂದು ಹೇಳಿದ್ದು, ತನಿಖೆ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಇನ್ನೆರಡು ವಾರದಲ್ಲಿ ತಿಳಿಸಬೇಕು, ಅಂತಿಮ ವರದಿ ಸಲ್ಲಿಸಬೇಕೆಂದು ದೆಹಲಿ ಹೈಕೋರ್ಟ್ ಪೊಲೀಸರಿಗೆ ತಾಕೀತು ಮಾಡಿದೆ. ದೆಹಲಿ ಪೊಲೀಸರು ಜವಾಬ್ದಾರಿಯುತವಾಗಿ ತನಿಖೆ ನಡೆಸುತ್ತಿಲ್ಲ ಎಂದು ತೀವ್ರವಾಗಿ ಟೀಕಿಸಿದೆ.
ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಜಿಎಸ್ ಸಿಸ್ತಾನಿ ಮತ್ತು ಚಂದರ್ ಶೇಕರ್ ಅವರು, ಈ ಘಟನೆ ನಡೆದಿದ್ದು 2014ರ ಜನವರಿಯಲ್ಲಾದರೂ, ತನಿಖೆಯಲ್ಲಿ ಯಾವುದೇ ಯಶಸ್ಸನ್ನು ಏಕೆ ಸಾಧಿಸಿಲ್ಲ ಎಂದು ತರಾಟಾಗೆ ತೆಗೆದುಕೊಂಡರು.
Comments