ಲೋಕ್ಪಾಲ್ ಜಾರಿಗೆ ಕೇಂದ್ರದ ವಿಳಂಬ ನೀತಿ ಖಂಡಿಸಿ ಮತ್ತೊಂದು ಹೋರಾಟ: ಅಣ್ಣಾ ಹಜಾರೆ ಎಚ್ಚರಿಕೆ

ನವೆದಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಪಾಲ್ ಮಸೂದೆ ಜಾರಿ ಮಾಡುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಪತ್ರ ಬರೆದಿದ್ದು ಜಾರಿ ಮಾಡದೇ ಹೋದರೆ ಮತ್ತೆ ದೆಹಲಿಯಲ್ಲಿ ಬೃಹತ್ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಲೋಕ್ ಪಾಲ್ ಮಸೂದೆ ಜಾರಿ ಮಾಡದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ಮೋದಿಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ.
ಅಣ್ಣಾ ಹಜಾರೆ ಪತ್ರದಲ್ಲಿ ಲೋಕಪಾಲ್ ಮಸೂದೆ ಮಂಡನೆ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕಕ್ಕಾಗಿ ನಾನು ನಿಮಗೆ ಮೂರು ವರ್ಷಗಳಿಂದ ಪತ್ರಗಳನ್ನು ಬರೆಯುತ್ತಲೇ ಇದ್ದೇನೆ ಆದರೆ ನೀವು ನನ್ನ ಪತ್ರಗಳಿಗೆ ಉತ್ತರವನ್ನೇ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಬೃಹತ್ ಆಂದೋಲನವನ್ನು ನಡೆಸಿ ಆರು ವರ್ಷಗಳು ಕಳೆದರೂ ಭ್ರಷ್ಟಾಚಾರ ಅಂತ್ಯಗೊಳಿಸಲು ಇಲ್ಲಿಯವರೆಗೂ ಯಾವುದೇ ಬಿಲ್ ಮಂಡನೆಯಾಗಿಲ್ಲ ಎಂದು ಪತ್ರದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
Comments