ದ್ವಿತೀಯ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೊಸ ರೂಲ್ಸ್

ವಿಜ್ಞಾನದ ಪಿಸಿಎಂಬಿ ವಿಷಯಗಳಲ್ಲಿ ಮಾತ್ರ ಹಳೇ ಪಠ್ಯಕ್ರಮದಂತೆ ಮುಂದೆಯೂ ಪರೀಕ್ಷೆ ನಡೆಯಲಿದೆ. ಆದರೆ ಕಲೆ, ವಾಣಿಜ್ಯ, ಭಾಷಾ ವಿಷಯಗಳು, ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು 2018 ಕೊನೆಯ ಅವಕಾಶವಾಗಿದೆ.
2018ರ ಮಾರ್ಚ್‍ನಲ್ಲಿ ನಡೆಯುವ ಪಬ್ಲಿಕ್ ಪರೀಕ್ಷೆ ಹಾಗೂ ಆ ನಂತರ ಫೇಲ್ ಆದವರಿಗೆ ನಡೆಸುವ ಸಪ್ಲಿಮೆಂಟರಿ ಪರೀಕ್ಷೆಗಳು ಮಾತ್ರ ಹಳೇ ಪಠ್ಯಕ್ರಮದಲ್ಲಿ ನಡೆಯುತ್ತವೆ. ಒಂದೊಮ್ಮೆ ಇದರಲ್ಲೂ ಫೇಲ್ ಆಗಿ ಮುಂದೆ 2019ರಲ್ಲಿ ಪರೀಕ್ಷೆ ಬರೆಯುತ್ತೇವೆ ಎಂದು ಹೊರಡುವವರಿಗೆ ಹಳೆ ಪಠ್ಯಕ್ರಮದಲ್ಲಿ ಬರೆಯಲು ಅವಕಾಶ ಇಲ್ಲ. ಇದನ್ನು ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಿದೆ.ವಿಜ್ಞಾನ ವಿಭಾಗದಲ್ಲಿ ಈ ಹಿಂದೆ 90+10(ಪ್ರಾಯೋಗಿಕ ಪರೀಕ್ಷೆ ಅಂಕ) ವ್ಯವಸ್ಥೆ ಇತ್ತು. ಇದಕ್ಕೆ ಬದಲಾವಣೆ ತಂದು 3 ವರ್ಷದ ಹಿಂದೆಯೇ ವಿಜ್ಞಾನ ವಿಭಾಗದಲ್ಲಿ 70+30 ಅಂಕಗಳ ಪಠ್ಯಕ್ರಮವನ್ನು ಜಾರಿಗೆ ತರಲಾಗಿದೆ.
Comments