ಪಾಕಿಸ್ತಾನದ ಮಗುವಿಗೆ ವೈದ್ಯಕೀಯ ವೀಸಾ ನೆರವು ನೀಡಿದ ಸಚಿವೆ ಸುಷ್ಮಾ ಸ್ವರಾಜ್

ಕಠಿಣ ಪರಿಸ್ಥಿತಿಯಲ್ಲಿರುವ ಪಾಕಿಸ್ತಾನದ ಮಗುವಿಗೆ ಭಾರತದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ವೀಸಾ ನೀಡಲಾಗುವುದು ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ರೊಹಾನ್ ಎಂಬ ಮಗುವಿಗೆ ವೈದ್ಯಕೀಯ ವೀಸಾ ಕೊಡಿಸಲು ನೆರವು ನೀಡಬೇಕೆಂದು ಈ ತಿಂಗಳ 15ರಂದು ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಚಿವೆ ಸುಷ್ಮಾ ಸ್ವರಾಜ್ ಭಾರತಕ್ಕೆ ಬಂದು ಮಗುವಿಗೆ ಚಿಕಿತ್ಸೆ ಕೊಡಿಸಲು ವೈದ್ಯಕೀಯ ವೀಸಾ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ವಿದೇಶಾಂಗ ಸಚಿವಾಲಯ, ಪಾಕಿಸ್ತಾನದ ನಿಜವಾದ ಅಗತ್ಯವಿರುವ ರೋಗಿಗಳಿಗೆ ವೈದ್ಯಕೀಯ ವೀಸಾವನ್ನು ಭಾರತ ಸರ್ಕಾರ ನೀಡಲಿದೆ ಎಂದು ಪ್ರಕಟಿಸಿತ್ತು.ಸ್ವಾತಂತ್ರ್ಯ ದಿನದಂದು ಟ್ವೀಟ್ ಮಾಡಿದ್ದ ವಿದೇಶಾಂಗ ಖಾತೆ ಸುಷ್ಮಾ ಸ್ವರಾಜ್, ನಮ್ಮ ಬಳಿಗೆ ಬಂದ ಬಾಕಿಯಿರುವ ಅಗತ್ಯತ ಪಾಕಿಸ್ತಾನಿ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡುವುದಾಗಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದರು.
Comments