ಮಿಸ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡ ಕೋಲಾರದ ಬೆಡಗಿ

ಹೈದರಾಬಾದ್ ನಲ್ಲಿ ನಡೆದ ಪ್ರತಿಷ್ಠಿತ ರಿಲಯನ್ಸ್ ಜ್ಯುವೆಲ್-2017 ನ ಮಿಸ್ ಇಂಡಿಯಾ ಕಿರೀಟವನ್ನ ಕೋಲಾರದ ರಮ್ಯಾ ಸರಣ್ ತನ್ನದಾಗಿಸಿಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ದೇಶ-ವಿದೇಶಗಳಿಂದ ಬಂದಿದ್ದ 80 ಮಂದಿ ಮಾಡೆಲ್‍ಗಳನ್ನು ಹಿಂದಿಕ್ಕಿ 5 ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತಳಾಗುವ ಮೂಲಕ ಮಿಸ್ ಇಂಡಿಯಾ ಕಿರೀಟವನ್ನ ತನ್ನ ಮುಡಿಗೇರಿಸಿಕೊಂಡಿದ್ದಾರೆ.ಕೋಲಾರದ ವಿನಾಯಕನಗರದ ಮೃತ ಪೊಲೀಸ್ ಪೇದೆ ಆರ್.ಎ.ಸರಣ್ ಹಾಗೂ ಲಕ್ಷ್ಮೀ ದಂಪತಿಯ ಮೂವರು ಮಕ್ಕಳಲ್ಲಿ ರಮ್ಯಾ ಪ್ರಥಮ ಪುತ್ರಿ. ಕೋಲಾರದಲ್ಲಿ ಪಿಯುಸಿವರೆಗೆ ತನ್ನ ವಿದ್ಯಾಭ್ಯಾಸವನ್ನ ಪೂರೈಸಿ, ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ಎಂಜಿನಿಯರ್ ಮುಗಿಸಿದ್ದಾರೆ.
ಕಳೆದ ಮಾರ್ಚ್‍ನಲ್ಲಿ `ಮಿಸ್ ಬೆಂಗಳೂರು’ ಆಗಿ ಕೂಡ ಆಯ್ಕೆಯಾಗಿದ್ರು. ಇದೀಗ ಕರ್ನಾಟಕಕದಿಂದ `ಮಿಸ್ ಇಂಡಿಯಾ’ ಸ್ಪರ್ಧೆಗೆ ಆಯ್ಕೆಯಾಗಿ `ಮಿಸ್ ಇಂಡಿಯಾ’ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ. `ಮಿಸ್ ಇಂಡಿಯಾ’ ಆದ ಬಳಿಕ ಇದೆ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದ ರಮ್ಯಾ, ಓದಿದ ಕೋಲಾರದ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ಕಾಲೇಜಿನಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದ್ರು.
Comments