ಜೈಲಿಗೆ ಹೋದ ನಂತ್ರವೂ ಬಾಬಾ ರಾಮ್ ರಹೀಮ್ ಬೇಡಿಕೆ ಕಡಿಮೆಯಾಗಿಲ್ಲ..!

ಜೈಲಿಗೆ ಹೋದ ನಂತ್ರವೂ ಬಾಬಾ ರಾಮ್ ರಹೀಮ್ ಬೇಡಿಕೆ ಕಡಿಮೆಯಾಗಿಲ್ಲ. ಜೈಲಿನಲ್ಲಿ ತಾನು ದತ್ತು ಪಡೆದ ಪುತ್ರಿ ಜೊತೆಗಿರಲು ಒಪ್ಪಿಗೆ ಕೇಳಿದ್ದನಂತೆ. ಇದನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಮಗಳು ಹನಿಪ್ರಿತ್ ಜೊತೆಗಿರಲು ಸೊಂಟದ ನೋವಿನ ಕಾರಣ ಹೇಳಿದ್ದ ಬಾಬಾ. ಮಗಳು ಹನಿಪ್ರಿತ್ ಆಕ್ಯುಪ್ರೆಶರ್ ನಲ್ಲಿ ಪರಿಣಿತೆ ಎಂದಿದ್ದ.
ಹರಿಯಾಣದ ಡೇರಾ ಸಚ್ಚಾ ಸೌಧ ಆಶ್ರಮದ ಪ್ರಮುಖ ರಾಮ್ ರಹೀಮ್ ದೋಷಿ ಎಂದು ಘೋಷಣೆಯಾದ ತಕ್ಷಣವೇ ಪೊಲೀಸರು ಬಂಧಿಸಿದ್ದರು. ಈ ವೇಳೆಯೂ ಹನಿಪ್ರಿತ್ ಜೊತೆಗಿದ್ದಳು. ಹೆಲಿಕಾಪ್ಟರ್ ನಲ್ಲಿ ಕುಳಿತು ರೋಹ್ಟಕ್ ಜೈಲಿಗೆ ಹೋಗಿದ್ದಳು. ಎರಡು ಗಂಟೆಗಳ ಕಾಲ ಜೈಲಿನ ಬಳಿ ಇದ್ದ ಅತಿಥಿ ಗೃಹದಲ್ಲಿದ್ದಳು.
ರಾಮ್ ರಹೀಮ್ ಜೈಲಿಗೆ ಶಿಫ್ಟ್ ಆಗ್ತಿದ್ದಂತೆ ಮಗಳನ್ನು ಜೊತೆಗಿಟ್ಟುಕೊಳ್ಳಲು ಅವಕಾಶ ಕೋರಿದ್ದ. ಇದಕ್ಕೆ ಸೊಂಟ ನೋವಿನ ಕಾರಣ ಹೇಳಿದ್ದ. ಸಿಬಿಐ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದ. ಆದ್ರೆ ಈ ಬಗ್ಗೆ ನಿರ್ಣಯತೆಗೆದುಕೊಳ್ಳುವ ಅಧಿಕಾರವನ್ನು ಹರ್ಯಾಣ ಸರ್ಕಾರ ಹಾಗೂ ಜೈಲಧಿಕಾರಿಗಳಿಗೆ ನ್ಯಾಯಾಲಯ ನೀಡಿತ್ತು. ಆದ್ರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದರು
Comments