ತಿಂಡಿ ಪ್ರಿಯರೇ ಎಚ್ಚರ ! ಇಂದಿರಾ ಕ್ಯಾಂಟೀನ್ ನಡೆಸೋಕೆ ಗುಣಮಟ್ಟ ಹಾಗೂ ಸುರಕ್ಷತಾ ಲೈಸೆನ್ಸ್ ಇಲ್ಲ



ಮೊದಲಿಗೆ ಮದ್ವೆ ಮನೆಯಲ್ಲಿ ಊಟ ತಯಾರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ, ಬಳಿಕ ನೀರಿಲ್ಲ ಎಂಬ ಕಾರಣಕ್ಕೆ ಇಂದೀರಾ ಕ್ಯಾಂಟೀನ್‍ಗೆ ಬೀಗ ಹಾಕಿ ಧಮ್ಕಿ ಹಾಕಿದ್ದ ಗುತ್ತಿಗೆದಾರರು. ಈ ಎಲ್ಲಾ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಎಡವಟ್ಟು ಬಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಆರಂಭಗೊಂಡು ವಾರ ಕಳೆದರೂ ಈವರೆಗೆ ಕ್ಯಾಂಟೀನ್ ನಲ್ಲಿ ಕೊಡುವ ಆಹಾರದ ಗುಣಮಟ್ಟ ಪರೀಕ್ಷೆಯೇ ಆಗಿಲ್ಲ ಅಂದ್ರೆ ನಂಬ್ತೀರಾ..? ಹೌದು ನಂಬಲೇಬೇಕು. ಯಾಕೆಂದ್ರೆ ತರಾತುರಿಯಲ್ಲಿ ಕ್ಯಾಂಟಿನ್ ಮಾಡಿದ ಬಿಬಿಎಂಪಿ, ಮತ್ತು ಸರ್ಕಾರಕ್ಕೆ ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆಯಿಂದ ಅನುಮತಿ ಪತ್ರ ಪಡೆದೇ ಇಲ್ಲ. ಇದನ್ನು ಸ್ವತಃ ಬಿಬಿಎಂಪಿ ಕಮೀಷನರೇ ಒಪ್ಪಿಕೊಂಡಿದ್ದಾರೆ.
ಕ್ಯಾಂಟೀನ್ ಉದ್ಘಾಟನೆಗೂ ಮುನ್ನವೇ ಎಫ್‍ಎಸ್‍ಎಸ್‍ಎಐನಿಂದ 110 ಕ್ಯಾಂಟೀನ್ ಕಾರ್ಯಾಚರಣೆ ಮಾಡೋದಕ್ಕೆ ಅನುಮತಿ ಪಡೆಯಬೇಕಾಗಿತ್ತು. ಆದ್ರೆ ಇದುವರೆಗೂ ಅನುಮತಿ ಪಡೆದಿಲ್ಲ. ಬಡವರಿಗೆ ಊಟ ಹೆಂಗಾದ್ರೇನು ಅನ್ನೋ ತಾತ್ಸಾರನಾ ಅಥವಾ ಆಹಾರದ ಗುಣಮಟ್ಟ ಬಟಾಬಯಲಾಗುತ್ತೆ ಅನ್ನೋ ಅನುಮಾನನ ಗೊತ್ತಿಲ್ಲ. ಕ್ಯಾಂಟೀನ್ ನಿಂದ ಊಟ ಸಪ್ಲೈ ಆದ ಮೇಲೆ ಈಗ ಎಚ್ಚೆತ್ತುಕೊಂಡು ಎಫ್‍ಎಸ್‍ಎಸ್‍ಎಐ ಅನುಮತಿಗೆ ಬಿಬಿಎಂಪಿ ಪತ್ರ ಬರೆದಿದೆ.
Comments