ಆಸ್ಪತ್ರೆಗೆ ದಾಖಲಾದ ಪ್ರಿಯಾಂಕಾ ಗಾಂಧಿ

ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಡೆಂಗ್ಯು ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ
ಜ್ವರದ ಕಾರಣದಿಂದ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಪ್ರಿಯಾಂಕಾ ಅವರನ್ನು ಪರೀಕ್ಷಿಸಿದಾಗ, ಡೆಂಗ್ಯು ಇರುವುದು ದೃಢಪಟ್ಟಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ.ಪತಿ ರಾಬರ್ಟ್ ವಾದ್ರಾ, ಸಹೋದರ ರಾಹುಲ್ ಗಾಂಧಿ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಪ್ರಿಯಾಂಕಾ ಆರೋಗ್ಯ ವಿಚಾರಿಸಿದ್ದಾರೆ.
ಆಗಸ್ಟ್ 23 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗಂಗಾರಾಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಡಿ.ಎಸ್. ರಾಣಾ ತಿಳಿಸಿದ್ದಾರೆ.
Comments