ರೇಪ್ ಕೇಸ್: ರಾಮ್ ರಹೀಮ್ ಗೆ ಶಿಕ್ಷೆ ಎಷ್ಟು ವರ್ಷಯಾಗಲಿದೆ ಗೊತ್ತಾ!
ಚಂಡೀಗಢ: ಹರ್ಯಾಣದ ಸ್ವಯಂಘೋಷಿತ ದೇವಮಾನ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ ರಹೀಮ್ ಸಿಂಗ್ ದೋಷಿ ಎಂದು ಹರ್ಯಾಣದ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ತೀರ್ಪು ನೀಡಿದೆ.
ಚಂಡೀಗಢ: ಹರ್ಯಾಣದ ಸ್ವಯಂಘೋಷಿತ ದೇವಮಾನ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ ರಹೀಮ್ ಸಿಂಗ್ ದೋಷಿ ಎಂದು ಹರ್ಯಾಣದ ಪಂಚಕುಲದ ವಿಶೇಷ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಸೋಮವಾರ ಆಗಸ್ಟ್ 28ರಂದು ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ. ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಸಾಬೀತಾಗಿದೆ. 28ರಂದು ಕೋರ್ಟ್ ನೀಡುವ ತೀರ್ಪಿನಲ್ಲಿ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಗೆ 7 ವರ್ಷ ಶಿಕ್ಷೆ ಆಗಬಹುದು. ಆದ್ರೆ ಹರ್ಯಾಣದಲ್ಲಿ ಉಂಟಾಗಿರುವ ಗಲಭೆ, ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನೋಡಿದಾಗ ಅಲ್ಲಿನ ಸರ್ಕಾರ ಕೂಡ ಹತೋಟಿಗೆ ತರುವಲ್ಲಿ ಪ್ರಯತ್ನಿಸುತ್ತಿದೆ. ಒಂದು ವೇಳೆ ದೇವಮಾನವ ರಹೀಮ್ ಗೆ 7 ವರ್ಷ ಆಗಬಹುದು ಅಥವಾ ಆಗದೇ ಇರಬಹುದು. ಯಾಕಂದರೆ ಕೋರ್ಟ್ 7 ವರ್ಷ ಶಿಕ್ಷೆ ಪ್ರಕಟ ಮಾಡಿದ್ದೇ ಆದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆದ್ದರಿಂದ ರಹೀಮ್ ಸಿಂಗ್ ಅವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ.
ಅತ್ತ, ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಇತ್ತ ಬಾಬಾ ಭಕ್ತರು ಹಿಂಸಾಚಾರದಲ್ಲಿ ತೊಡಗಿದ್ದಾರೆ, ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಟಿವಿ ಚಾನಲ್`ಗಳ ೋಬಿ ವ್ಯಾನ್`ಗಳನ್ನ ಜಖಂ ಮಾಡಲಾಗಿದೆ. ಪೊಲಿಸರು ಹಾಗೂ ಅರೆಸೇನಾಪಡೆ ಪರಿಸ್ಥಿತಿ ಹತೋಟಿಗೆ ತರಲು ಶತಪ್ರಯತ್ನ ನಡೆಸುತ್ತಿವೆ.
ಇತ್ತ, ಪಂಜಾಬ್`ನ 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ತೀರ್ಪಿನ ಬಳಿ ದೇರಾ ಸಚ್ಚಾ ಸೌಧಧ ಮುಖ್ಯಸ್ಥ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮಮ್ ಸಿಂಗ್ ಅವರನ್ನ ಅಂಬಾಲ ಜೈಲಿಗೆ ಕರೆದೊಯ್ಯಲಾಗಿದೆ.
Comments