ಮತ್ತಷ್ಟು ಕಡಿಮೆಯಾಗಲಿದೆ ನಿಮ್ಮ ಮೊಬೈಲ್ ಬಿಲ್..!
ಆರಂಭದಲ್ಲಿ ಮೊಬೈಲ್ ಕರೆ, ಮೆಸೇಜ್ ಎಲ್ಲವೂ ಬಲು ದುಬಾರಿಯಾಗಿತ್ತು. ಹೊಸ ಹೊಸ ತಂತ್ರಜ್ಞಾನ ಬೆಳಕಿಗೆ ಬರುತ್ತಿದ್ದಂತೆ ಮೊಬೈಲ್ ಬಳಕೆಯೂ ಅಗ್ಗವಾಗಿದೆ. ಗ್ರಾಹಕರ ಮೊಬೈಲ್ ಬಿಲ್ ಮೊತ್ತವೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗ್ತಾನೇ ಇದೆ
ಇನ್ಮುಂದೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ವಿಶ್ಲೇಷಕರ ಅಂದಾಜಿನ ಪ್ರಕಾರ ಇನ್ನೊಂದು ವರ್ಷದಲ್ಲಿ ಮೊಬೈಲ್ ಟಾರಿಫ್ ಶೇ.25-30ರಷ್ಟು ಕಡಿಮೆಯಾಗಲಿದೆ. ಕಳೆದ ಒಂದು ವರ್ಷದಲ್ಲಿ ಈ ದರ ಶೇ.25-32ರಷ್ಟು ಇಳಿಕೆ ಕಂಡಿದೆ.ಅಧಿಕ ಡೇಟಾ ಬಳಕೆ ಮಾಡುವವರು ಶೇ.60-70ರಷ್ಟು ಇಳಿಕೆಯ ಲಾಭ ಪಡೆದಿದ್ದಾರೆ. ರಿಲಯೆನ್ಸ್ ಜಿಯೋ ಆಗಮನದ ನಂತರ ಈ ಬೆಳವಣಿಗೆಗಳು ನಡೆದಿವೆ. ಗ್ರಾಹಕರು ಜಿಯೋ ನೆಟ್ವರ್ಕ್ ಗೆ ಶಿಫ್ಟ್ ಆಗದಂತೆ ತಡೆಯಲು ಏರ್ಟೆಲ್, ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳು ಕೂಡ ಬೆಲೆ ಇಳಿಕೆ ಮಾಡಿವೆ.
ಆದ್ರೆ ಇದರಿಂದ ಟೆಲಿಕಾಂ ಕ್ಷೇತ್ರದ ಒತ್ತಡ ಹೆಚ್ಚಲಿದೆ, ನಷ್ಟದ ಹೊರೆಯೂ ಜಾಸ್ತಿಯಾಗಲಿದೆ ಅಂತಾ ವಿಶೇಷಕರು ಹೇಳಿದ್ದಾರೆ. 2017ರಲ್ಲಿ ವ್ಯಕ್ತಿಯ ಸರಾಸರಿ ಮೊಬೈಲ್ ಬಿಲ್ ತಿಂಗಳಿಗೆ 240-280 ರೂಪಾಯಿಯಷ್ಟಾಗಿದೆ. ಈ ಮೊತ್ತ ಇನ್ನೊಂದು ವರ್ಷದಲ್ಲಿ ಶೇ.30ರಷ್ಟು ಕಡಿಮೆಯಾಗಲಿದೆ.
Comments