ನಾನು ಎಲ್ಲೂ ಓಡಿ ಹೋಗಿಲ್ಲ, ಸ್ವರ್ಗದಂತಹ ಜಾಗದಲ್ಲಿದ್ದೇನೆ: ಪೂಜಾ ಗಾಂಧಿ

ಪೂಜಾ ಗಾಂಧಿ ಎಲ್ಲಿ ಹೋದರು. ಗಾಂಧಿನಗರದಲ್ಲೀಗ ಪೂಜಾ ಗಾಂಧಿ ನಾಪತ್ತೆ ಸುದ್ದಿ ಈಗ ದಟ್ಟವಾಗಿದೆ.ಪೂಜಾ ಗೆ ಫೋನ್ ಮಾಡಿದರೆ, ಪೂಜಾ ಸಿಗುವುದೇ ಇಲ್ಲ. ಪೋನ್ ನಾಟ್ ರೀಚೇಬಲ್ ಅಂತ ಉತ್ತರ ಬರುತ್ತದೆ. ಆದರೆ, ಪೂಜಾ ಗಾಂಧಿ ಸುವರ್ಣ ನ್ಯೂಸ್'ಗೆ ಸಿಕ್ಕಿದ್ದಾರೆ. ತಮ್ಮ ನಾಪತ್ತೆ ಸುದ್ದಿ ಕೇಳಿ ಸ್ವತ ಪೂಜಾ ಶಾಕ್ ಆಗಿದ್ದಾರೆ.
'ಏನ್ ಇದು ನಾನ್ಸೆನ್ಸ್ ಅಂತಲೂ ಕೇಳಿದ್ದಾರೆ. ಪೂಜಾ ಎಲ್ಲಿ ಹೋಗೀದ್ದಿರ ಅಂತ ಕೇಳಿದ್ರೆ ಸಾಕು. ನಾನು ಈಗ ಪೂಣೆಯಿಂದ ದೂರದ ಸ್ಥಳದಲ್ಲಿದ್ದೇನೆ, ಸ್ವರ್ಗದಂತ ಜಾಗ ಇದು. ಇಲ್ಲಿ ಪೋನ್ ಕಾಲ್ ಬರುವುದಿಲ್ಲ. ಆನಂದ ಕ್ರೀಯಾ ರೀಟ್ರಿಟ್ ಸೆಂಟರ್ ಅಂತ ಇದರ ಹೆಸರು. ಪುಣೆಯಿಂದ 2 ಗಂಟೆ ಜರ್ನಿ ಆಗುತ್ತದೆ. ಇಲ್ಲಿ ನಾನು ಮೆಂಬರ್. ಬೇಕು ಅನಿಸಿದಾಗ ಇಲ್ಲಿಗೆ ಬರುತ್ತೇನೆ. ಆದರೆ, ನಾನು ಓಡಿ ಹೋಗಿಲ್ಲ. ನಾಪತ್ತೇನೂ ಆಗಿಲ್ಲ. ಸುಮ್ನೆ ಯಾರ್ ಯಾರೋ, ಏನ್ ಏನೋ ಸುದ್ದಿ ಹಬ್ಬಿಸ್ತಾರೆ. ಅವರಿಗೆ ಬುದ್ದಿ ಹೇಳಿ
Comments