2022ಕ್ಕೆ ಮೋದಿ ಮಾಸ್ಟರ್ ಪ್ಲಾನ್, ನೋ ಟೆರರಿಸಂ & ನಕ್ಸಲಿಸಂ

ನವದೆಹಲಿ: ದೇಶವನ್ನು ಈಗಾಗಲೇ ಪ್ರಗತಿಯತ್ತ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿ ಸರ್ಕಾರ ವಿಷನ್ 2022ಗೆ ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಿಂದ ಮುಕ್ತಿ ಮಾಡಲಿದೆ.
ದೇಶದ ನಾಗರಿಕರ ನೆಮ್ಮದಿಗೆ ಕಂಟಕವಾಗಿರುವ ಟೆರರಿಸಂ, ನಕ್ಸಲಿಸಂ ಹಾಗೂ ಈಶಾನ್ಯ ಭಾರತಗಳಲ್ಲಿ ನೆರೆ ದೇಶಗಳ ಪ್ರಜೆಗಳ ಒಳನುಸುಳುವಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ದೇಶವನ್ನು ಮುಕ್ತವಾಗಿಸುವುದಾಗಿ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.
ಲಖ್ನೋದಲ್ಲಿ ಏರ್ಪಡಿಸಲಾಗಿದ್ದ ಸಂಕಲ್ಪ್ ಸೇ ಸಿದ್ದ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳಲ್ಲಿ ಕಾಶ್ಮೀರ ಸಮಸ್ಯೆ, ನಕ್ಸಲಿಸಂ ಸಮಸ್ಯೆ, ಒಳನುಸುಳುವಿಕೆ ಸಮಸ್ಯೆಗಳು ಪ್ರಮುಖವಾದವು. 2022ರ ಹೊತ್ತಿಗೆ ಈ ಸಮಸ್ಯೆಗಳಿಗೆ ಮಂಗಳ ಹಾಡಲು ನಿರ್ಧರಿಸಲಾಗಿದೆ. ಆ ಹೊತ್ತಿಗೆ ಹೊಸ ಭಾರತವೊಂದನ್ನು ಕಟ್ಟಲೂ ನಿರ್ಧರಿಸಲಾಗಿದೆ” ಎಂದು ಅವರು ತಿಳಿಸಿದರು.
Comments