'ಚಲ್ತಾ ಹೇ' ಬೇಡ, 'ಬದಲ್ ಹೇ ಸಕ್ತಾ ಹೇ' ಆಗಲಿ- ಮೋದಿ

15 Aug 2017 1:25 PM | General
330 Report

ನವದೆಹಲಿ: ಚಲ್ತಾ ಹೇ ಎನ್ನುವ ಧೋರಣೆ ಬಿಟ್ಟು, ಬದಲ್ ಸಕ್ತಾ ಹೇ ಅನ್ನುವ ಧೋರಣೆಯನ್ನು ನಮ್ಮದಾಗಿಸಿಕೊಳ್ಳಬೇಕು, ಆಗ ದೇಶ ಬದಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

71ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ನಾಲ್ಕನೇ ಬಾರಿಗೆ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಭಾರತ ಮುಂದಿನ 5 ವರ್ಷಗಳಲ್ಲಿ ಒಳಗೆ ಭ್ರಷ್ಟಾಚಾರ, ಉಗ್ರವಾದ , ವರ್ಣಭೇದ ನೀತಿಯಿಂದ ಮುಕ್ತವಾಗಬೇಕು. ಸ್ವಚ್ಛ ಭಾರತವಾಗಬೇಕು, ಸ್ವರಾಜ್ಯದ ಕನಸು ನನಸಾಗಬೇಕು. ಇದಕ್ಕೆ ಭಾರತೀಯರೆಲ್ಲರೂ ಒಂದಾಗಿ ಹೊಸ ಇಂಡಿಯಾಕ್ಕಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾಶ್ಮೀರ ಸಮಸ್ಯೆಗೆ ಬಂದೂಕನ್ನು ಉಪಯೋಗಿಸಬೇಕಿಲ್ಲ. ಒಂದು ಅಪ್ಪುಗೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.
ಅಪನಗದೀಕರಣ ಮತ್ತು ಭಾರತ ಯೋಜನೆಗೆ ಭಾರತೀಯರೆಲ್ಲರೂ ಬೆಂಬಲ ನೀಡಿದ್ದಾರೆ. ಇದರಿಂದ ಬಹಳಷ್ಟು ಬದಲಾವಣೆ ಕಂಡು ಬಂದಿದೆ. ಅಪನಗದೀಕರಣ ಬಳಿಕ 3 ಲಕ್ಷ ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದ್ದು, ಈಗಾಗ್ಲೇ 2 ಲಕ್ಷಕಂಪನಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದರು.

 

Edited By

venki swamy

Reported By

Sudha Ujja

Comments