ಕ್ಯಾಂಟೀನಲ್ಲಿ ಮೊದಲ ದಿನ ಊಟ ಫ್ರೀ: ರಾಹುಲ್ ಗಾಂಧಿ ಅವರಿಗೂ ಕ್ಯಾಂಟೀನ್'ನಲ್ಲೇ ಊಟ

ಬೆಂಗಳೂರು: ಉದ್ಯಾನನಗರಿ ನಾಗರಿಕರಿಗೆ ಕಡಿಮೆ ದರದಲ್ಲಿ ಊಟ- ತಿಂಡಿ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಇಂದಿರಾ ಕ್ಯಾಂಟೀನ್’ ಯೋಜನೆ ಚಾಲನೆಗೆ ಕ್ಷಣಗಣನೆ ಶುರುವಾಗಿದ್ದು, ಕ್ಯಾಂಟೀನ್ ಉದ್ಘಾಟನೆಗೊಳ್ಳುವ ಆಗಸ್ಟ್ 16ರ ಮೊದಲ ದಿನ 101 ಕ್ಯಾಂಟೀನ್ಗಳಲ್ಲೂ ನಾಗರಿಕರಿಗೆ ಉಚಿತವಾಗಿ ಊಟ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ನಗರದಲ್ಲಿನ 101 ಕ್ಯಾಂಟೀನ್ಗಳನ್ನು ಲೋಕಾರ್ಪಣೆ ಮಾಡಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ
ಚಿಕ್ಕಪೇಟೆ ಕ್ಷೇತ್ರದ ಕನಕನಪಾಳ್ಯದಲ್ಲಿ ಜಯನಗರ ವಾರ್ಡ್ ಕ್ಯಾಂಟೀನ್ ಉದ್ಘಾಟನೆ ಮಾಡಲಿರುವ ರಾಹುಲ್‌ಗಾಂಧಿ ಅವರು ಆಹಾರ ಸೇವಿಸುವ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ಇಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ 5 ಸಾವಿರ ಮಂದಿಗೆ ಉಚಿತವಾಗಿ ಊಟ ವಿತರಣೆ ಮಾಡಲು ಬಿಬಿಎಂಪಿ ಎಲ್ಲಾ ಸಿದ್ಧತೆ ಪೂರ್ಣಗೊಳಿಸಿದೆ. ಪ್ರತಿ ದಿನ ಬೆಳಗಿನ ಉಪಾಹಾರಕ್ಕೆ ರೂ. 5 ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ ಕೇವಲ ರೂ 10 ನಿಗದಿ ಮಾಡಲಾಗಿದೆ. ಆದರೆ, ಬುಧವಾರ ಉದ್ಘಾಟನೆಗೊಳ್ಳಲಿರುವ 101 ಕ್ಯಾಂಟೀನ್‌ಗಳಲ್ಲೂ ತಲಾ 500 ಮಂದಿಗೆ ರಾತ್ರಿಯ ಊಟವನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ಖಚಿತಪಡಿಸಿವೆ.
ಆಗಸ್ಟ್ 15ರ ಸಂಜೆ ವೇಳೆಗೆ 101 ಕ್ಯಾಂಟೀನ್ ನಿರ್ಮಾಣ ಪೂರ್ಣಗೊಳಿಸಬೇಕಾದ ಒತ್ತಡದಲ್ಲಿರುವ ಬಿಬಿಎಂಪಿ ಆಯುಕ್ತರು ಭಾನುವಾರ ತಡರಾತ್ರಿ 3ರ ವರೆಗೂ ರಾತ್ರಿ ಇಡೀ ವಿವಿ‘ ಕ್ಯಾಂಟೀನ್‌ಗಳ ಪರಿಶೀಲನೆ ನಡೆಸಿದರು. ಬಿಬಿಎಂಪಿ ವ್ಯಾಪ್ತಿಯ 104 ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, 95ಕ್ಕೂ ಹೆಚ್ಚು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಆಗಸ್ಟ್ 15೫ರ ಮಂಗಳವಾರ ಸಂಜೆ ವೇಳೆಗೆ 101 ಕ್ಯಾಂಟೀನ್ ಗಳೂ ಬಿಬಿಎಂಪಿಗೆ ಹಸ್ತಾಂತರವಾಗಲಿವೆ. ಬಳಿಕ ಬುಧವಾರ ಬೆಳಗ್ಗೆ ಊಟ ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಆಹಾರ ಪೂರೈಕೆ ಗುತ್ತಿಗೆ ಪಡೆದ ಸಂಸ್ಥೆಗಳು ಮಾಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments