ದೆಹಲಿಯ ಕೆಂಪುಕೋಟೆ ಮೇಲೆ ಹಾರಿದ 71ನೇ ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜ

ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯ ಮೇಲೆ ಮಂಗಳವಾರ ಪ್ರಧಾನಿಯಿಂದ ತ್ರಿವರ್ಣ ಧ್ವಜಾರೋಹಣ ನೆರವೇರುವ ಮೂಲಕ 71ನೇ ಸ್ವಾತಂತ್ರ್ಯೋತ್ಸವಕ್ಕೆ ನೆರೆದಿದ್ದ ದೇಶಾಭಿಮಾನಿಗಳು ಸಾಕ್ಷಿಯಾದರು.ರಾಷ್ಟ್ರದೆಲ್ಲೆಡೆ ಸ್ವಾಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸಲ್ಲಿಸಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣ ಮುಗಿಸಿದಿ ಪ್ರಧಾನಿ ಜನರತ್ತ ಕೈಬೀಸಿ ಶುಭ ಕೋರಿದರು. ಆಗಸದಲ್ಲಿ ಬಲೂನುಗಳು ತ್ರಿವರ್ಣ ಧ್ವಜವನ್ನು ಹೊತ್ತು ಮತ್ತಷ್ಟು ಮತ್ತಷ್ಟು ಎತ್ತರಕ್ಕೆ ಹಾರಿದವು, ನೆರೆದಿದ್ದ ದೇಶಾಭಿಮಾನಿಗಳಲ್ಲಿ ಉತ್ಸಾಹ ತುಂಬಿದವು.ಭಾಷಣ ಮುಗಿದ ಬಳಕ ಕೆಂಪುಕೋಟೆಯಿಂದ ಕೆಳಗಿಳಿದ ಬಂದು ಮೋದಿ ಅವರು, ಶಿಸ್ತಿನಿಂದ ಕುಳಿತಿದ್ದ ಮಕ್ಕಳ ಬಳಿಗೆ ಬಂದು ಶುಭಕೋರುತ್ತಾ ಮಕ್ಕಳ ಮಧ್ಯೆ ಬೆರೆತರು, ಮಕ್ಕಳು ಪ್ರಧಾನಿ ಅವರ ಕೈ ಕುಲುಕಿ ಸಂಭ್ರಮಿಸಿದರು.
Comments