ವಿಶ್ವದ ಅತ್ಯಂತ ಚಿಕ್ಕ ತ್ರಿವರ್ಣ ಧ್ವಜ

ನವದೆಹಲಿ: ವಿಶ್ವದ ಅತ್ಯಂತ ಚಿಕ್ಕದಾದ ಚಿನ್ನದಿಂದ ಮಾಡಿದ ತ್ರಿವರ್ಣ ಧ್ವಜ ತಯಾರು ಮಾಡಲಾಗಿದೆ. ಜಗತ್ತಿನ ಅತಿ ಚಿಕ್ಕದಾದ ತ್ರಿವರ್ಣ ಧ್ವಜದ ಗಾತ್ರ ಎಷ್ಟಿದೆ ಅಂದ್ರೆ ಇದನ್ನು ಸೂಜಿಯಿಂದಲು ತೆಗೆಯುವ ಸಾಮರ್ಥ್ಯ ಪಡೆದಿದೆ. ಉದಯಪುರದ ಯುವಕರೊಬ್ಬರು ಈ ಧ್ವಜವನ್ನು ತಯಾರು ಮಾಡಿದ್ದಾರೆ.
ಮೂಲತಃ ಉದಯಪುರದ ನಿವಾಸಿಯಾಗಿರುವ ಇಕ್ಬಾಲ್ ಎಂಬ ಯುವಕರೊಬ್ಬರು 70ನೇ ಸ್ವಾತಂತ್ರ್ಯ ದಿನಕ್ಕಾಗಿ ಈ ವಿನೂತನ ಧ್ವಜವನ್ನು ತಯಾರು ಮಾಡಿದ್ದಾರೆ. ಇಡೀ ದೇಶವೇ ಆ.15ರಂದು ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತಿದೆ. ಅದಕ್ಕಾಗಿ ಇಕ್ಬಾಲ್ ವಿಶ್ವದ ಅತಿ ಚಿಕ್ಕದಾದ ಚಿನ್ನದಿಂದ ಮಾಡಿದ ಧ್ವಜವನ್ನು ತಯಾರು ಮಾಡಿದ್ದಾರೆ. ಇದು ವರ್ಲ್ಡ್ ರೆಕಾರ್ಡ್ ನಲ್ಲಿ ನೋಂದಾವಣಿ ಮಾಡುವ ಅವಕಾಶ ಪಡೆದುಕೊಂಡಿದೆ.
ಇದಲ್ಲದೇ, ಇದಕ್ಕೂ ಮುನ್ನ ಗಿನ್ನೆಸ್ ಬುಕ್ ಆಫ್ ರೆಕಾರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಹಲವು ಪುಸ್ತಕಗಳಲ್ಲಿ ದಾಖಲಾದ 52 ಕೃತಿಗಳನ್ನು ಇಕ್ಬಾಲ್ ರಚಿಸಿದ್ದಾರೆ. ಇದು ಇವರ 53ನೇ ವಿಶ್ವದಾಖಲೆಯಾಗಿರಲಿದೆ.
Comments