ದೇಶದ ಹೆಮ್ಮೆ ಹೆಚ್ಚಿಸಿದ ನಟಿ ಐಶ್ವರ್ಯ ರೈ
ನವದೆಹಲಿ: ಅಲ್ಲಿ ನೆರದಿದ್ದವರ ಕಣ್ಣು ಬಾಲಿವುಡ್ ನಟಿ ಐಶ್ವರ್ಯ ರೈ ಮೇಲಿತ್ತು. ಯಾಕಂದ್ರೆ ಅವರು ಭಾಗಿಯಾಗಿದ್ದು ಅತಿಂಥ ಕಾರ್ಯಕ್ರಮದಲ್ಲಿ ಅಲ್ಲ. ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಮೂಲಕ ಇಡೀ ಜಗತ್ತೇ ಅವರತ್ತ ನೋಡುವಂತೆ ಮಾಡಿದರು.
ಆಸ್ಟ್ರೇಲಿಯಾದಲ್ಲಿ ನಡೆದ ಇಂಡಿಯನ್ ಫಿಲ್ಮಂ ಫೆಸ್ಟಿವಲ್ ಇನ್ ಮೆಲ್ಬೋರ್ನ್ ಕಾರ್ಯಕ್ರಮದಲ್ಲಿ ಐಶ್ ಪಾಲ್ಗೊಂಡಿದ್ರು. ಈ ವೇಳೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ವಾರ್ಷಿಕ ಸಮಾರಂಭದಲ್ಲಿ ಪುತ್ರಿ ಆರಾಧ್ಯ ಜತೆಗೆ ಮಿಂಚುತ್ತಿದ್ದರು. ಲೈಟ್ ನೀಲಿ ಬಣ್ಣದ ಸೆಲ್ವಾರ್ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಐಶ್ವರ್ಯ, ಅಲ್ಲಿ ನೆರದಿದ್ದವರ ಗಮನ ಸೆಳೆದರು.
ಈ ವೇಳೆ ಕಾರ್ಯಕ್ರಮದ ಬಳಿಕ ಮಾತನಾಡಿರುವ ಐಶ್ವರ್ಯ ರೈ, ಮೆಲ್ಬೋರ್ನ್ ನ ಜನತೆಗೆ ನನ್ನ ಧನ್ಯವಾದಗಳು, ನೀವು ನೀಡಿದ ಗೌರವ, ಪ್ರೀತಿಗೆ ಧನ್ಯವಾದಗಳು ಎಂಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೆಮ್ಮೆ ಹಾಗೂ ಸಂತೋಷದ ವಿಷಯ.ತುಂಬಾ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡಿರುವುದಕ್ಕೆ ಧನ್ಯವಾದಗಳು, ನಮ್ಮ ದೇಶದ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವುದು ನನಗೆ ಮತ್ತು ನನ್ನ ಪ್ರೀತಿಯ ಆರಾಧ್ಯಳಿಗೆ ಶಾಶ್ವತವಾಗಿ ಅವಿಸ್ಮರಣೀಯ ದಿನವಾಗಲಿದೆ ಎಂದುಐಶ್ವರ್ಯ ರೈ ಹೇಳಿದ್ದಾರೆ.
Comments