Report Abuse
Are you sure you want to report this news ? Please tell us why ?
ತಿರಂಗ ಹಾರಿಸಿ, ಮದರಸಗಳಿಗೆ ಸೂಚನೆ

12 Aug 2017 2:31 PM | General
481
Report
ಭೋಪಾಲ್: ಉತ್ತರಪ್ರದೇಶದ ಮದರಸ ಶಿಕ್ಷಾ ಪರಿಷತ್ ನಂತೆಯೇ ಮಧ್ಯಪ್ರದೇಶದ ಮದರಸ ಬೋರ್ಡ್ ಕೂಡಾ ಸ್ವಾತಂತ್ರ್ಯೋತ್ಸವದ ದಿನ ಮದರಸಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವಂತೆ ಆದೇಶ ಮಾಡಿದೆ. ರಾಜ್ಯದ ಎಲ್ಲಾ ಮದರಸಗಳಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನ ಆಚರಿಸಬೇಕು. ಅವತ್ತು ಮದರಸಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು, ಅಲ್ಲದೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಫೊಟೋಗಳನ್ನು ರವಾನಿಸಬೇಕೆಂದು ಮದರಸ ಬೋರ್ಡ್ ನ ಮುಖ್ಯಸ್ಥ ಪ್ರೊ ಸೈಯದ್ ಇಮಾಮ್ ವುದ್ದೀನ್ ಸುತ್ತೋಲೆ ಹೊರಡಿಸಿದ್ದಾರೆ. ಯೋಗಿ ಎಪೆಕ್ಟ್ ಮದರಸಗಳಲ್ಲಿ ರಾಷ್ಟ್ರಧ್ವಜಾರೋಹಣ ರಾಷ್ಟ್ರಗೀತೆ ಗಾಯನಕ್ಕೆ ಸಿದ್ಧತೆ ನಡೆಯಲಾಗುತ್ತಿದೆ.

Edited By
Suhas Test

Comments