ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ!
ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ಬಹಿರಂಗವಾಗಿ ತಮ್ಮ ಪತ್ನಿ ಮೇಲೆ ಪ್ರೀತಿ ತೋರ್ಪಡಿಸಿಲ್ಲ. ಅಷ್ಟೆ ಅಲ್ಲದೇ ಪತ್ನಿ ವಿಚಾರವನ್ನು ಅಷ್ಟಾಗಿ ಮಾತನಾಡಿಲ್ಲ. ಆದರೆ ಗುರುವಾರ ಕಾಕತಾಳೀಯ ಎಂಬಂತೆ ಸಿಎಂ ಮೈಸೂರು ಮೃಗಾಲಯದಲ್ಲಿನ ಹೆಣ್ಣು ಆನೆ ಮರಿಗೆ ‘ಪಾರ್ವತಿ’ ಎಂದು ಹೆಸರಿಟ್ಟಿದ್ದಾರೆ.
ಪಾರ್ವತಿ ಸಿಎಂ ಪತ್ನಿ ಹೆಸರಾಗಿರುವ ಕಾರಣ ಇದೇ ಹೆಸರು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಮೃಗಾಲಯದಲ್ಲಿ ಇತ್ತೀಚೆಗೆ ಜನಿಸಿದ ಆನೆಮರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಇವತ್ತು ನಾಮಕರಣ ಮಾಡಿಸಲಾಯಿತು.
ಕಳೆದ ಕೆಲ ದಿನಗಳ ಹಿಂದೆ ಐರಾವತಿ ಹಾಗೂ ಅಭಿಮನ್ಯು ಎಂಬ ಆನೆಗಳಿಗೆ ಜನಿಸಿದ್ದ ಹೆಣ್ಣು ಮರಿ ಆನೆ ಇದು. ಮೈಸೂರು ಮೃಗಾಲಯದ 125 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆನೆ ಮರಿಗೆ ಸಿಎಂ ನಾಮಕರಣ ಮಾಡಿದರು.
ಸಂಧಿ ಪಾಠ: ಮೈಸೂರಿನ ಮೃಗಾಲಯದಲ್ಲಿ ಸಿಎಂ ಸಂಧಿ ಪಾಠ ಮಾಡಿದ್ದಾರೆ. ಮೃಗ + ಆಲಯ ಇದು ಸವರ್ಣದೀರ್ಘ ಸಂಧಿ, ಗುಣಸಂಧಿ ಅಂದರೆ ಏನು ಗೊತ್ತಾ ಎಂದು ಸಿಎಂ ಸಭಿಕರನ್ನು ಪ್ರಶ್ನೆ ಮಾಡಿದರು.
Comments