ಕಾವೇರಿ ಜಲಾಶಯದಿಂದ ನಾಲೆಗಳಿಗೆ ನೀರು: ಸಿಎಂ ಘೋಷಣೆ
ಕಾವೇರಿ ನದಿಯಿಂದ ನಾಲೆಗಳಿಗೆ ನೀರು ಇವತ್ತು ಹರಿಬಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಸಂಸದರೊಂದಿಗೆ ಸಭೆ ನಡೆಸಿದ ನಂತರ ನಿನ್ನೆ ಮಾತನಾಡಿದ ಅವರು, ನಾಲೆಗಳಿಗೆ ಹರಿಬಿಟ್ಟ ನೀರಿನಿಂದ ಭತ್ತ, ಕಬ್ಬು ಬೆಳೆಯಬೇಡಿ. ಇದಕ್ಕೆ ನೀರು ಕೊಡಲು ಆಗುವುದಿಲ್ಲ. ಮಳೆಯಾಧಾರಿತ ಬೆಳೆಗಳನ್ನು ಬೆಳೆಯಿರಿ ಎಂದು ರೈತರಿಗೆ ಸಲಹೆ ನೀಡಿದ್ದಾರೆ.
ಕಬಿನಿ, ಕೆರ್‌ಎಸ್, ಹಾರಂಗಿ, ಹೇಮಾವತಿ ಜಲಾಶಯಗಳಿಂದ ಕಾವೇರಿ ಕಣಿವೆಯ ರೈತರ ನಾಲೆಗಳಿಗೆ ನೀರು ಹರಿದುಬಿಡಲಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ ಎಂದು ತಿಳಿಸಿದ್ದಾರೆ.ಕಳೆದ 34 ದಿನಗಳಿಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಾಲೆಗಳಿಗೆ ನೀರು ೇಹರಿಸುವಂತೆ ಒತ್ತಾಯಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
Comments