ಮಂತ್ರಾಲಯದಲ್ಲಿ ಇಂದು ರಾಯರ ಮಧ್ಯಾರಾಧನೆ

09 Aug 2017 3:12 PM | General
610 Report

ರಾಯಚೂರು: ಕಲಿಯುಗದ ಕಾಮಧೇನು ಬೇಡಿದ ವರ ನೀಡುವ ಸಂತ ಎಂದು ಖ್ಯಾತಿ ಪಡೆದಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ನಡೆಯುತ್ತಿದೆ.

ಇಂದು ರಾಯರ ಮಧ್ಯಾರಾಧನೆ ಜರುಗುತ್ತಿದೆ. ಬೆಳಿಗ್ಗೆಯಿಂದಲೇ ಅಪಾರ ಪ್ರಮಾಣದ ಭಕ್ತರು ರಾಯರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ರಾಯರ ಮೃತ್ತಿಕ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಕ್ಷೀರಾಭಿಷೇಕ,, ಪಂಚಾಮೃತ ಅಭಿಷೇಕ, ಕನಕಾಭಿಷೇಕ ಅರ್ಚನೆ ಮೊದಲಾದ ಪೂಜೆ ಪುನಸ್ಕಾರಗಳು ಇಂದು ನಡೆಯಲಿದೆ.

ನಿನ್ನೆ ಮಂಗಳವಾರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಮಠದ ಸಂಪ್ರದಾಯದ ವಿಧಿ- ವಿಧಾನಗಳೊಂದಿಗೆ ನಡೆಯಿತು. ಈ ಬಾರಿಯ ಪೂರ್ವಾರಾಧನೆಗೆ ವರುಣನ ಸಿಂಚನವಾಗಿ ವಾತಾವರಣಕ್ಕೆ ತಂಪೆರೆಯಿತು.ಶ್ರೀಮಠದಲ್ಲಿ ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ ಶ್ರೀ ಉತ್ಸವ ರಾಯರ ಪಾದಪೂಜೆಮತ್ತು ರಾಘವೇಂದ್ರ ಶ್ರೀಗಳ ಮೂಲ ಬೃಂದಾವನಕ್ಕೆ ಪಂಚಾಬೃತ ಅಬಿಷೇಕ ನೆರವೇರಿಸಿ ವಿಶೇಷ ಪುಷ್ಪಲಂಕಾರ ಮಾಡಲಾಯಿತು. ಪೂರ್ವಾರಾಧನೆ ನಿಮಿತ್ತ ರಾಯರ ಗ್ರಂಥಗಳ ಪಾರಾಯಣ, ಪಲ್ಲಕ್ಕಿಸೇವೆ ದೇವ ಮಂತ್ರಗಳು, ದಾಸವಾಣಿ ಪ್ರವಚನಗಲು ಶ್ರೀಕ್ಷೇತ್ರದಲ್ಲಿ ಅನುರಣಿಸಿದವು. ನಂತರ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶ್ರೀಮುಲರಾಮದೇವರಿಗೆ ವಿಶೇಷ ಪೂಜೆ, ಅಲಂಕಾರ ಸಮರ್ಪಣೆ ಮಹಾಮಂಗಳಾರತಿ ಸೇವೆ ನಡೆಸಿಕೊಟ್ಟರು.

Edited By

Suhas Test

Reported By

Sudha Ujja

Comments