ಕಾಂಗ್ರೆಸ್ ಅಸ್ತಿತ್ವಕ್ಕೆ ಕುತ್ತು?

08 Aug 2017 12:08 PM | General
1119 Report

ಕೊಚ್ಚಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಲೆಯಲ್ಲಿ ದೇಶದ ಹಿರಿಯ ಪಕ್ಷವೆನಿಸಿಕೊಂಡಿರುವ ಕಾಂಗ್ರೆಸ್ ಅಸ್ತಿತ್ವಕ್ಕೇ ಕುತ್ತು ಬಂದಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಜೈ ರಾಂ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಇತ್ತೀಚೆಗೆ ಮಂಕಾಗುತ್ತಿದೆ. ಸಂಸತ್ತಿನಲ್ಲೂ ಬಹುಮತ ಕಳೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೆ, ಚುನಾವಣೆಗಳಲ್ಲೂ ಹಿನ್ನಡೆ ಅನುಭವಿಸುತ್ತಿರುವ ಬೆನ್ನಲ್ಲೇ ರಮೇಶ್ ಈ ಹೇಳಿಕೆ ನೀಡಿರುವುದು ಭಾರೀ ಮಹತ್ವ ಪಡೆದಿದೆ.

1996 ರಿಂದ 2004 ರವರೆಗೆ ರಾಜಕೀಯ ಬಿಕ್ಕಟ್ಟು ಎದುರಿಸಿದ್ದಾಗ, 1977 ರ ತುರ್ತು ಪರಿಸ್ಥಿತಿ ನಂತರ ಪಕ್ಷದ ಸ್ಥಿತಿ  ಇದೇ ರೀತಿ ಇತ್ತು. ಆದರೆ ಈಗಂತೂ ಪಕ್ಷದ ಅಸ್ತಿತ್ವಕ್ಕೇ ಕುತ್ತು ಬಂದಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Edited By

Suhas Test

Reported By

Sudha Ujja

Comments