ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಸಿಬ್ಬಂದಿ ಮುಷ್ಕರ
ಚೆನ್ನೈ: ಬ್ಯಾಕಿಂಗ್ ವಲಯದಲ್ಲಿ ಸುಧಾರಣೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಒಕ್ಕೂಟಸಂಯುಕ್ತ ವೇದಿಕೆ ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಪ್ರಕಟಿಸಿದೆ. ಮುಷ್ಕರ ಸಂಬಂಧ ಈಗಾಗಲೇ ನೊಟೀಸ್ ನೀಡಿದ್ದು, ಇಡೀ ಬ್ಯಾಂಕ್ ವಲಯ ಆಗಸ್ಟ್ 22ರ ಮುಷ್ಕರ ದಲ್ಲಿ ಭಾಗಿಯಾಗಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿರುವುದಾಗಿ ಐಎಎನ್ ಎಸ್ ವರದಿ ಮಾಡಿದೆ. ವೇತನ ಪರಿಷ್ಕರಣೆ, ಸುಧಾರಣಾ ಕ್ರಮಗಳು ಸೇರಿದಂತೆ ಹಲವು ವಿಚಾರಗಳು ಮುಂದಿಟ್ಟು ಯುಎಫ್ ಬಿಯು ಪ್ರತಿಭಟನೆ ನಡೆಸಲು ಮುಂದಾಗಿದೆ. ಬ್ಯಾಕಿಂಗ್ ವಲಯದ ಒಂಬತ್ತು ಒಕ್ಕೂಟಗಳನ್ನು ಯುಎಫ್ ಬಿಯು ಒಳಗೊಂಡಿದೆ.
Comments