ಸಾಮಾನ್ಯರ ಓಡಾಟಕ್ಕೂ ತೊಂದರೆ.!

ರಾಮನಗರ: ಕಲ್ಲು ಗಣಿಗಾರಿಕೆ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೀತಾ ಇದೆ. ಜನಸಾಮಾನ್ಯರು ಕ್ರಷರ್ ಹಾಗೂ ಸಿಡಿಮದ್ದುಗಳ ಆರ್ಭಟಕ್ಕೆ ದೆಹರಿ ಕೃಷಿ ಚಟುವಟಿಕೆಗಳಿಂದಲೇ ವಿಮುಖರಾಗುತ್ತಿದ್ದಾರೆ. ಮತ್ತೊಂದೆಡೆ ಗಣಿ ಮಾಲೀಕರು ರೈತರಿಗೆ ಪರಿಹಾರ ನೀಡಿ ಅವರನ್ನು ಸಮಾಧಾನಗೊಳಿಸುವ ಯತ್ನ ಮಾಡುತ್ತಿದ್ದಾರೆ.
ಉರಗಹಳ್ಳಿ ಕೆಂಚಿಗರಹಳ್ಳಿ ಹೆಗ್ಗಡ ಕೆರೆ, ಕರಡಿಗೌಡನ ದೊಡ್ಡಿ, ಮೇಗಳ ದೊಡ್ಡಿಹಾಗೂ ಆಸುಪಾಸು ಕ್ರಷರ್ ಗಳ ಅಬ್ಬರ ಹೆಚ್ಚಾಗಿದ್ದು, ಎಲ್ಲೆಲ್ಲೂ ಧೂಳು ಆವರಿಸಿತೊಡಗಿದೆ. ಮನೆಯ ನೀರಿನ ತೊಟ್ಟಿಯಲ್ಲೂದೂಳು, ತೊಡುವ ಬಟ್ಟೆಗಳ ಮೇಲೂ ದೂಳು ತುಂಬಿಕೊಂಡಿದೆ. ಇದರಿಂದಾಗಿ ಸುತ್ತಲಿನ ಹೊಲಗಳಲ್ಲಿ ಬೆಳೆಗಳ ಮೇಲೂ ಪರಿಣಾಮ ಬೀರತೊಡಗಿದ್ದು, ಕೃಷಿ ಚಟುವಟಿಕೆ ಕಾರ್ಯಕ್ಕೆ ಹಿನ್ನಡೆ ಆಗಿದೆ.ಕೇತೋಹಳ್ಳಿಯಿಂದ ಹೆಗ್ಗಡಗೆರೆ ಭಾಗದಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಜನರು ಹೊಲ ಹಸುನು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿ ಸಿಕೊಂಡಿದ್ದರು. ಕೆಲ ರೈತರು ರಾಗಿ ನಾಟಿಗೆ ಮುಂದಾಗಿದ್ದು, ಮಳೆ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದರು.
ಈ ಭಾಗದಲ್ಲಿ 15-20 ಕ್ರಷರ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಕೃಷಿ ಚಟುವಟಿಕೆ ಮತ್ತು ಜನಸಾಮಾನ್ಯರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ಖಂಡಿಸಿ ಈ ಹಿಂದೆ ಹಲವು ಗ್ರಾಮಗಳ ಜನರು ಬೀದಿಗೆ ಇಳಿದಿದ್ದರು.ಇದರಿಂದ ಎಚ್ಚೆತ್ತುಕೊಂಡ ಗಣಿ ಮಾಲೀಕರು ಜಮೀನು ಮಾಲೀಕರಿಗೆ ವರ್ಷಕ್ಕಿಷ್ಟು ಪರಿಹಾರ ನೀಡುವ ಮೂಲಕ ಸಮಾಧಾನ ಪಡಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
Comments