ಮಕ್ಕಳಿಗಾಗಿ ಸ್ನೇಹಿ ಕೋರ್ಟ್ ಆರಂಭ

ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದ್ದು, ಅದರ ಮುಂದುವರಿದ ಭಾಗವಾಗಿಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ಕಾಯಕಲ್ಪ ಕೊಟ್ಟಿರುವ ರಾಜ್ಯ ಸರ್ಕಾರ ಎರಡು ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದು, ಅದು ಶನಿವಾರದಿಂದ ತನ್ನ ಕೆಲಸ ಆರಂಭಿಸಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ನೊಂದಿರುವ ಸಂತ್ರಸ್ಶ ಮಕ್ಕಳ ಮನಸ್ಸಿಗೆ ಕೋರ್ಟ್ ವಿಚಾರಣೆ ದುಷ್ಪರಿಣಾಮಬೀರದಂತೆ ನೋಡಿಕೊಳ್ಳುವ ಸಲುವಾಗಿ ಮಕ್ಕಳ ಸ್ನೇಹಿ ಕೋರ್ಟ್ ಗಳನ್ನು ರೂಪಿಸಲಾಗಿದೆ. ವಿಚಾರಣೆಗೆ ಬರುವ ಸಂತ್ರಸ್ಥ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಕೊಠಡಿ, ಮಕ್ಕಳಿಗೆ ಆಪ್ತವೆನಿಸುವ ವಾತಾವರಣ ರೂಪಿಸಲು ಗೋಡೆಗಳ ಮೇಲೆ ಚಿತ್ರಪಟುಗಳುಆಟವಾಡಲು ಆಟಿಕೆ ವಸ್ತುಗಳು, ಹಸಿವಾದರೆ ತಿಂಡಿ, ಸಿಹಿ ತಿನಿಸುಗಳು ಕೊಡುವ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಮಕ್ಕಳ ಸ್ನೇಹಿ ನ್ಯಾಯಾಲಯಗಳಿಗೆ ಸುಪ್ರಿಂಕೋರ್ಟ್ ನ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಚಾಲನೆ ನೀಡಿದ್ದಾರೆ.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಬಾಲ ನ್ಯಾಯ ಸಮಿತಿ ಅಧ್ಯಕ್ಷರು ಆದ ಹೈಕೋರ್ಟ್ ನ್ಯಾ.ಅಶೋಕ್ಬಿ. ಹಿಂಚಗೇರಿ, ನ್ಯಾ. ಬಿ.ವಿ ನಾಗರತ್ನ , ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಶೋಕ್ ಜಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಸೇರಿದಂತೆ ಹಲವರು ಇದಕ್ಕೆ ಸಾಕ್ಷಿಯಾದರು.ಈ ಮೂಲಕ ದೆಹಲಿ, ಗೋವಾ, ತೆಲಂಗಾಣದ ಬಳಿಕ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ಮಕ್ಕಳ ಸ್ನೇಹಿ ಕೋರ್ಟ್ ಗಳನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ರಾಜ್ಯಸರ್ಕಾರ ಪಾತ್ರವಾಗಲಿದೆ. ಮಕ್ಕಳ ಮಾನಸಿಕತೆ , ಸಂವೇದನೆ ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಈ ವಿಶೇಷ ಕೋರ್ಟ್ ಗಳ ಕಾರ್ಯಶೈಲಿ ಸಂಪೂರ್ಣ ವಿಭಿನ್ನವಾಗಿಲಿದೆ. ಮಕ್ಕಳಿಗೆ ಆಪ್ತ ಹಾಗೂ ಆಕರ್ಷಕ ವೆನಿಸುವ ಪ್ಲೇ ಹೋಮ್ ಗಳ ಮಾದರಿಯಲ್ಲಿ ಅವು ಕಾರ್ಯನಿರ್ವಹಿಸಲಿವೆ. ವಿಚಾರಣೆಗೆ ಒಳಪಡುವ ಮಕ್ಕಳಿಗೆ ಇಲ್ಲಿ ಭಯ ಮುಕ್ತ ಹಾಗೂ ಕೌಟುಂಬಿಕ ಪರಿಸರ ವಾತಾವರಣ ನಿರ್ಮಾಣ ಇರಲಿದೆ. ಅದು ಕೋರ್ಟ್ ಆಗಿದ್ದರೂ, ಕೋರ್ಟ್ ರೀತಿ ಕಾಣಿಸುವುದಿಲ್ಲ.
Comments