ಬುಲೆಟ್ ಟ್ರೈನ್ ಸೆಪ್ಟಂಬರ್ ನಲ್ಲಿ ಶಂಕುಸ್ಥಾಪನೆ
ದೆಹಲಿ: ಬಹುನಿರೀಕ್ಷಿತ ಬುಲೆಟ್ ಟ್ರೈನ್ ಯೋಜನೆಗೆ ಕಾಲ ಕೂಡಿ ಬಂದಿದೆ. ಮುಂದಿನ ತಿಂಗಳು ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ ನಲ್ಲಿ ಹಾಗೂ ಅಹಮದಾಬಾದ್ ಮಧ್ಯೆ ಟ್ರೈನ್ ಯೋಜನೆಗೆ ನೆರವೇರಲಿದೆ. ಜಪಾನ್ ಸಹಕಾರದೊಂದಿಗೆ ಭಾರತ ಬುಲೆಟ್ ಟ್ರೈನ್ ಯೋಜನೆಯನ್ನು ಕೈಗೊಂಡಿದೆ.
ಸೆಪ್ಟೆಂಬರ್ ನಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಆಬೆ ಜಂಟಿಯಾಗಿ ಅಹಮದಾಬಾದ್ ನಲ್ಲಿ 508 ಕಿ.ಮೀ ದೂರದ ಮುಂಬೈ ಹಾಗೂ ಅಹಮದಾಬಾದ್ ಬುಲೆಟ್ ಟ್ರೈನ್ ನಲ್ಲಿ ಉಭಯ ನಗರಗಳ ಮಧ್ಯೆ ಕೇವಲ 2 ಗಂಟೆಗಳಲ್ಲಿ ಸಂಚರಿಸಬಹುದು. ಈ ಬುಲೆಟ್ ಟ್ರೈನ್ ಯೋಜನೆಗಾಗಿ850 ಎಕರೆ ಭೂಮಿ ಬೇಕಾಗಿದ್ದು, ಈಗಾಗಲೇ ಭಾರತೀಯ ರೈಲ್ವೆ ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಸೆಪ್ಟೆಂಬರ್ ಮುನ್ನವೇ ಮುಂಬೈ -ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೆ ಚಾಲನೆ ಸಿಗಬೇಕಿತ್ತು. ಆದರೆ ಭಾರತೀಯ ರೈಲ್ವೆಗೆ ಅನುಗುಣವಾಗಿ ಯೋಜನೆ ವರದಿಯನ್ನು ಸಿದ್ಧಪಡಿಸಲು ಜಪಾನ್ ಅಧಿಕಾರಿಗಳಿಂದ ತಡವಾಗಿತ್ತು. ಆರಂಭಿಕ ಹಂತದ ಯೋಜನಾ ವರದಿಯಲ್ಲಿ ಕೆಲ ಬದಲಾವಣೆ ಮಾಡಿ ಜಪಾನ್ ಅಧಿಕಾರಿಗಳು ಯೋಜನಾ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಸೆಪ್ಟೆಂಬರ್ ನಲ್ಲಿ ಶಂಕುಸ್ಥಾಪನೆಯಾದರೂ, 2018ರಲ್ಲಿ ಯೋಜನೆಗೆ ಕಾಮಗಾರಿ ಆರಂಭಗೊಳ್ಳಲಿದೆ ಮೊದಲನೆ ಹಾಗೂ ಡಿಸೆಂಬರ್ ನಲ್ಲಿ ಗುಜುರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಹಮದಾಬಾದ್ ನಲ್ಲಿ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
Comments