ಎಂಎನ್ಎಸ್ ಪುಂಡಾಟಿಗೆ ಕೊನೆ ಯಾವಾಗ?

ಮುಂಬೈ: ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಗುಜರಾತಿ ನಾಮಫಲಕಗಳ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದಾರೆ. ನಗರದ ಎಲ್ಲೆಡೆ ವ್ಯಾಪಾರಿಗಳು, ಅಂಗಡಿ, ಹಾಗೂ ಮಳಿಗೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಗುಜುರಾತಿ ನಾಮಫಲಕಗಳನ್ನು ಹೊಂದಿದ್ದ ನಗರದಲ್ಲಿನ ಜುವೆಲ್ಲರಿ ಶೋರೂಮ್ ಮತ್ತು ದಕ್ಷಿಣ ಭಾರತೀಯ ರೆಸ್ಟೋರೆಂಟ್ ಒಂದನ್ನು ಗುರಿಯಾಗಿಸಿ ದಾಳಿ ಮಾಡಿದ ಬೆನ್ನಲ್ಲೇ ಭದ್ರತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಅಚ್ಚರಿ ಅಂದ್ರೆ ಈ ಅಂಗಡಿಗಳ ನಾಮಫಲಕ ಇಂಗ್ಲಿಷ್ , ಮರಾಠಿ ಹಾಗೂ ಗುಜರಾತಿ ಭಾಷೆಯನ್ನು ಬಳಸಲಾಗಿತ್ತಾದರೂ ಈ ಮಳಿಗೆಗಳು ನಾಮಫಲಕಗಳು ಎಂಎನ್ಎಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದವು.
ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಎಂಎನ್ ಎಸ್ ವ್ಯಾಪಾರಿಗಳ ಅಂಗಡಿ ಮಳಿಗೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ನಗರದ ವಿಲೇ ಪಾರ್ಲೆಯಲ್ಲಿ ಎಂಎನ್ಎಸ್ ತನ್ನ ಪುಂಡಾಟಿಗೆ ಚಾಲನೆ ನೀಡುತ್ತಿದ್ದಂತೆಯೇ ಫೆಡರೇಷನ್ ಆಯುಕ್ತರಿಗೆ ಪತ್ರ ಬರೆದು ಗಮನಕ್ಕೆ ತಂದಿತ್ತು. ಈಗ ಎಂಎನ್ ಎಸ್ ಕಾರ್ಯಕರ್ತರ ಪುಂಡಾಟಿಕೆ ಮತ್ತಷ್ಟು ವಿಸ್ತರಣೆ ಯಾಗಿದ್ದು, ನಗರದ ಹಲವೆಡೆ ಹರಡಿದೆ.
Comments