ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಸಂಖ್ಯೆ!

ಮಂಗಳೂರು: ಆಟವಾಡುತ್ತಾ ಶಾಲೆಗೆ ಹೋಗುತ್ತ ಆಡಿ ನಲಿದಾದುವ ವಯಸ್ಸಿನಲ್ಲೇ ಅಪ್ರಾಪ್ತ ವಯಸ್ಸಿನ ಮಕ್ಕಳೇ ಗರ್ಭಿಣಿಯರಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕಕ್ಕೆಕೀಡುಮಾಡಿದೆ.ಚಿಕ್ಕ ವಯಸ್ಸಿನಲ್ಲೇ ಹಲವು ಅಪ್ರಾಪ್ತ ಮಕ್ಕಳು ತಾಯ್ತನದ ಭಾರ ಹೊರುತ್ತಿದ್ದಾರೆ. 18 ವರ್ಷಕ್ಕೆ ಮೊದಲೇ ಗರ್ಭ ಧರಿಸುತ್ತಿರುವುದು ದುರಂತದ ವಿಷಯ.
ಉಭಯ ಜಿಲ್ಲೆಗಳಲ್ಲಿ ಕಳೆದ ಮೂರು ವರೆ ವರ್ಷಗಳಲ್ಲಿ ಇಂತಹ 23 ಪ್ರಕರಣಗಳು ರಾಜ್ಯ ಕಲ್ಯಾಣ ಮುಂದೆ ದಾಖಲಾಗಿರುವುದು ಆತಂಕಕ್ಕೀಡು ಮಾಡಿವೆ. ದಕ್ಷಿಣ ಕನ್ನಡದ 13ಮತ್ತು ಉಡುಪಿ ಜಿಲ್ಲೆಯ 10 ಮಕ್ಕಳು ಇದರಲ್ಲಿ ಸೇರಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸುತ್ತಿರುವರಲ್ಲಿ ಬಹುತೇಕ 14 ವರ್ಷದ ಮೇಲ್ಪಟ್ಟವರು. ಇವಿಷ್ಟು ಬೆಳಕಿಗೆ ಬಂದಿರುವ ಪ್ರಕರಣಗಳು. ಆದರೆ ಬೆಳಕಿಗೆ ಬಾರದ ಪ್ರಕರಣಗಳು ಅದೆಷ್ಟೋ ಇವೆ.
Comments