ಕಸ ವಿಲೇವಾರಿಯಲ್ಲಿ ಮೇಯರ್ ಅವ್ಯವಹಾರ, ಬಿಬಿಎಂಪಿ ಬೊಕ್ಕಸಕ್ಕೆ 200 ಕೋಟಿ ನಷ್ಟ
ಕಸ ವಿಲೇವಾರಿ ಅವ್ಯವಹಾರದಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಶಾಮೀಲಾಗಿದ್ದು, ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ. ನಷ್ಟ ಸಂಭವಿಸುತ್ತದೆ. ಈ ನಷ್ಟಾನ ಕಾಂಗ್ರೆಸ್‍ನೋರು ಭರಿಸ್ತಾರಾ ಎಂದು ಪ್ರಶ್ನಸಿರುವ ಪ್ರತಿ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕಸವಿಲೇವಾರಿ ಗುತ್ತಿಗೆಗೆ ಟೆಂಡರ್ ಕರೆಯದೆ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ ಸರ್ಕಾರಕ್ಕೆ ಶೇ.15ರಷ್ಟು ಸರ್ವೀಸ್ ಟ್ಯಾಕ್ಸ್ ಕಟ್ಟಬೇಕು. ಇದು ಮೇಯರ್ ಪದ್ಮಾವತಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಬೇಜವಾಬ್ದಾರಿತನದ ಪರಮಾವಧಿ. ಇದÀರಿಂದ ಸರ್ಕಾರಕ್ಕೆ ಸರ್ವೀಸ್‍ಚಾರ್ಜ್ ಮೂಲಕ 200 ಕೋಟಿಗೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ಹಣ ತೆರಿಗೆದಾರರ ದುಡ್ಡು. ಹಾಗಾಗಿ ಮೇಯರ್ ನಗರದ ನಾಗರಿಕರಿಗೆ ಉತ್ತರ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ರೆಡ್ಡಿ ಆಗ್ರಹಿಸಿದರು.
ನಾನು ಕಳೆದ ಹಲವಾರು ಸಭೆಗಳಲ್ಲಿ ಕಸವಿಲೇವಾರಿ ಗುತ್ತಿಗೆ ಕರೆಯಬೇಕೆಂದು ಒತ್ತಾಯ ಮಾಡಿದ್ದೆ. ಆದರೆ, ಆಡಳಿತ ನಡೆಸುತ್ತಿರುವವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ 200 ಕೋಟಿ ರೂ. ಹೊರೆ ಬಿದ್ದಿದೆ. ಇವರು ಬೆಂಗಳೂರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಸ ವಿಲೇವಾರಿ ಘಟಕಗಳನ್ನು ಮುಚ್ಚಿಸಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಕೇವಲ ಹಣ ಲಪಟಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು. ಸ್ಟೀಲ್‍ಬ್ರಿಡ್ಜ್ ನಿಲ್ಲಿಸಿದ್ದರಿಂದ ಕಮಿಷನ್‍ನಿಂತಿಹೋಗಿದೆ ಎಂದುಕೊಂಡು ಕಸದಲ್ಲಿ ಹಣ ಮಾಡಲು ಹರಟಿದ್ದಾರೆ. ಹೀಗಾಗಿ ಮೇಯರ್ ಪದ್ಮಾವತಿ ಹಾಗೂ ಜಾರ್ಜ್ ಅವರು ನಾಗರದ ನಾಗರಿಕರಿಗೆ ಸಮಜಾಯಿಷಿ ನೀಡಬೇಕೆಂದು ಒತ್ತಾಯಿಸಿದರು.
Comments