ಡಿಕೆಶಿ ಮನೆ ಮೇಲೆ ಇವತ್ತೇ ಐಟಿ ದಾಳಿ ನಡೆಸಲು ಮುಖ್ಯ ಕಾರಣ ಬಹಿರಂಗ!

ಕಾಂಗ್ರೆಸ್'ನ ಪ್ರಭಾವಿ ಸಚಿವ ಕರ್ನಾಟಕದ ಇಂಧನ ಸಚಿವ ಡಿ. ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ರೆಸಾರ್ಟ್'ನಲ್ಲಿ ಆಶ್ರಯ ನೀಡಿರುವ ಬೆನ್ನಲ್ಲೇ ಈ ದಾಳಿ ನಡೆದಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. ಸದ್ಯ ಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಯೊಂದು ತಿಳಿದು ಬಂದಿದ್ದು, ಡಿಕೆಶಿ ಮನೆ ಮೇಲೆ ಇಂದೇ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಇದೇ ಕಾರಣ ೆಂದುಹೇಳಲಾಗುತ್ತಿದೆ.
ಸದ್ಯ ಕೇಳಿ ಬರುತ್ತಿರುವ ಮಾತುಗಳ ಅನ್ವಯ ಡಿಕೆಶಿ ಮನೆ ಮೇಲೆ 3 ದಿನದ ಹಿಂದೆಯೇ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಇಂದು ಗುಜರಾತ್ ಶಾಸಕರಿಗೆ ಇವತ್ತು ಗಿಫ್ಟ್ ಕೊಡುವ ಕಾರ್ಯಕ್ರಮ ನಿಗದಿಯಾಗಿತ್ತು. ಡಿಕೆಶಿ ಯಾವ ಗಿಫ್ಟ್ ನೀಡಲಿದ್ದರು ಎಂಬ ವಿಚಾರ ಗುಜರಾತ್ ಶಾಸಕರಿಗೂ ತಿಳಿದಿರಲಿಲ್ಲವಂತೆ. ಆದರೆ ಈ ಕುರಿತಾದ ಮಾಹಿತಿ ಮೊದಲೇ ಲಭ್ಯವಾಗಿದ್ದರಿಂದ ಗಿಫ್ಟ್ ಕೊಡುವ ಮುನ್ನವೇ ಐಟಿ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.
Comments