ಶಿಕ್ಷಣ ಇಲಾಖೆ ವರದಿಯಲ್ಲಿ ಏನಿದೆ, ಕಾಲೇಜು ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂದೇಟು?
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಪ್ರವೇಶಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದ್ದೇಯೇ? ಎಂಬಪ್ರಶ್ನೆ ಮೂಡಿದೆ. ಮತ್ತೊಂದೆಡೆ ಶಿಕ್ಷಣ ಇಲಾಖೆಯ ವರದಿ ಎಲ್ಲರಲೂ ಆಶ್ಚರ್ಯ ಮೂಡಿಸುವಂತಿದೆ. ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯ ಬಗ್ಗೆ ಸಮೀಕ್ಷೆ ಇಂದ ಬಹಿರಂಗವಾಗಿದೆ. ಖಾಸಗಿ ಮಾಧ್ಯಮದ ಮಾಹಿತಿಯಂತೆ, 2015-16ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ರಾಜ್ಯದ ವಿದ್ಯಾರ್ಥಿಗಳು ಸಂಖ್ಯೆ 3.07 ಲಕ್ಷ ಇತ್ತು.
ಆದರೆ 2016-17 ನೇ ಸಾಲಿನಲ್ಲಿ ಅದು 2.92 ಲಕ್ಷಕ್ಕೆ ಇಳಿಕೆಯಾಗಿತ್ತು. 2017-18ನೇ ಸಾಲಿನ ಪ್ರವೇಶ ಪ್ರಕ್ರಿಯೆ ಇನ್ನು ನಡೆಯುತ್ತಿದೆ. ಈ ಬಾರಿ ವಿದ್ಯಾರ್ಥಿಗಳ ದಾಖಲಾತಿ ಕಳೆದ ವರ್ಷಕ್ಕಿಂತಲೂ ಕಡಿಮೆ ಇದೆ. ಕಲೆ (ಆರ್ಟ್ಸ್) ಮತ್ತು ವಿಜ್ಞಾನ (ಸೈನ್ಸ್) ಕೋರ್ಸ್ ಗಳಿಗೆ ಹೋಲಿಸಿದರೆ ವಾಣಿಜ್ಯ(ಕಾಮರ್ಸ್) ಪದವಿಗೆ ಮಾತ್ರ ಬೇಡಿಕೆ ಇದೆ ಎಂದು ಅನೇಕ ಕಾಲೇಜುಗಳ ಪ್ರಾಂಶುಪಾಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದ್ವಿತೀಯ ಪಿಯುಪೂರಕ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಮರು ಮೌಲ್ಯ ಮಾಪನಕ್ಕೆ ಇನ್ನು ಸಮಯ ಇದೆ. ಹಾಗಾಗಿ ಈ ವರ್ಷಪ್ರವೇಶ ಸಂಖ್ಯೆ ಈಗಲೇ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಇನ್ನೊಂದು ಮಾಹಿತಿಯಂತೆ, ವೈದ್ಯಕೀಯ ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳತ್ತ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿದ್ದಾರೆ. ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಮುಂದೆ ಬರುತ್ತಿಲ್ಲ, ಒಂದು ವೇಳೆ ಪ್ರವೇಶ ಪಡೆದರೂ ಅದು ಬೆರಳಣಿಕೆಯಷ್ಟೇ.
Comments