ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ
ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಐಡಿ ಕಣ್ಣು ಬಿದ್ದಿದೆ. ಎಲ್. ರವಿ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಕುಮಾರ್ ನಿವಾಸದ ಮೇಲೆ ಐಡಿ ದಾಳಿ ನಡೆದಿದೆ. ಅಲ್ಲದೇ ಈಗಲೇ ಟನ್ ರೆಸಾರ್ಟ್ ನಲ್ಲೂ ಡಿ.ಕೆ ಸುರೇಶ್ ಮತ್ತು ಡಿ.ಕೆ ಶಿವಕುಮಾರ್ ಉಳಿದುಕೊಂಡಿದ್ದ ಕೊಠಡಿಗೂ ಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿ. ಕೆ ಶಿವಕುಮಾರ್ ಗುಜರಾತ್ ಕಾಂಗರೆಸ್ ಶಾಸಕರ ವಾಸ್ತವ್ಯದ ಹೊಣೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಹಣ ಸಂಗ್ರಹದ ಶಂಕೆಯ ಮೇಲೆ ಐಟಿ ಅಧಿಕಾರಿಗಳು ಇಬ್ಬರೂ ಸಹೋದರರಿಗೆ ಮೊಬೈಲ್ ಕೂಡಾ ನೀಡದೆ ವಿಚಾರಣೆ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Comments