ಶಾಸಕ ಜಮೀರ್ ಅಹ್ಮದ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟರ ದಂಡು
ಬೆಂಗಳೂರು: ಚಾಮರಾಜನಗರ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿ ಆಗಿಆಚರಿಸಿಕೊಂಡಿದ್ದಾರೆ. ಈ ವೇಳೆ ಶಾಸಕರ ಹುಟ್ಟುಹಬ್ಬಕ್ಕೆ ಬಾಲಿವುಡ್ ನ ಇಡೀ ದಂಡೇ ಅಲ್ಲಿ ಆಗಮಿಸಿತ್ತು. ನಟ ಸಲ್ಮಾನ್ ಖಾನ್ಸಹೋದರ ಸಾಹಿಲ್ ಖಾನ್ ಅವರು ಜಮೀರ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ ಬಳಿಕ ಸಾಹಿಲ್ ಸುದ್ದಿಗಾರರ ಜತೆ ಮಾತನಾಡಿದರು.
ಜಮೀರ್ ಪುತ್ರ ಬಾಲಿವುಡ್ ಗೆ ಪ್ರವೇಶ ಪಡೆಯುತ್ತಿರುವುದು ಸಂತಸದ ವಿಷಯ ಜಹೀದ್ ಖಾನ್ ಅವರನ್ನು ಬಾಲಿವುಡ್ ಗೆ ಸ್ವಾಗತಿಸುತ್ತೇವೆ.ಅವರು ಚಿತ್ರರಂಗದಲ್ಲಿ ಉನ್ನತವಾಗಿ ಬೆಳೆಯಲಿ ಎಂದು ಹಾರೈಸಿದರು.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದರು. ಅವರ ಬದಲಾಗಿ ಸಹೋದರ ಆಗಮಿಸಿದ್ದಾರೆ. ರಾಜಕೀಯ ಕಾರಣಗಳಿಂದ ನಾನು ನಟರನ್ನು ಕಾರ್ಯಕ್ರಮಕ್ಕೆ ಕರೆಸಿಲ್ಲ ಎಂದರು. ಈ ವೇಳೆ ನಟ ಸೋನು ಸೂದ್, ಟಾಲಿವುಟ್ ನಟ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು, ಅಭಿಮಾನಿಗಳು ಅಲ್ಲಿ ನೆರದಿದ್ದರು.
Comments