ಹುಬ್ಬಳ್ಳಿಯಲ್ಲಿ ಮಾತೆ ಮಹಾದೇವಿ ವಿರುದ್ಧ ಪ್ರತಿಭಟನೆ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯ ಮಾಡುತ್ತಿರುವ ಮಾತೆ ಮಹಾದೇವಿ ಹಾಗೂ ಅವರ ಬೆಂಬಲಿಗರು ಪಂಚಪೀಠಗಳ ಪರಂಪರೆಯನ್ನು ಅವಹೇಳನ ಮಾಡುತ್ತಿದ್ದಾರೆಂದು ಆರೋಪಿಸಿ ವಿವಿಧ ಮಠಾಧೀಶರು, ವೀರಶೈವ ಮುಖಂಡರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಯಲ್ಲಾಪುರ ಓಣಿಯ ಶ್ರೀಶೈಲ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಶಿಂಪಿಗಲ್ಲಿ, ಜವಳಿಸಾಲ, ದುರ್ಗದಬೈಲ್, ಬ್ರಾಡವೇ, ಮ್ಯಾದಾರ ಓಣಿ, ದಾಜೀಬಾನಪೇಟೆ, ಕೆಸಿ ಸರ್ಕಲ್, ಮಿನಿ ವಿಧಾನಸೌಧ ತಲುಪಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಪ್ರತಿಭಟನಾಕಾರರು ಮಾತೆ ಮಹಾದೇವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾತೆ ಮಹಾದೇವಿ ಅವರು ವೀರಶೈವ ಹಾಗೂ ಅವರ ಆಚರಣೆ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಬಸವಣ್ಣನ ವಚನಗಳನ್ನು ಕೃತಿಚೌರ್ಯ ಮಾಡಿ ಸಮುದಾಯದಿಂದ ತಿರಸ್ಕೃತಗೊಂಡಿದ್ದ ಇವರು ಸನಾತನ ವೀರಶೈವ ಧರ್ಮವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.
Comments