ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ.ಸುನಿಲ್ ಕುಮಾರ್ ಅಧಿಕಾರ ಸ್ವೀಕಾರ

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಟಿ. ಸುನಿಲ್ ಕುಮಾರ್ ಅವರು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಿಕಟಪೂರ್ವ ಕಮಿಷನರ್ ಪ್ರವೀಣ್ ಸೂದ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಗುಪ್ತಚರ ವಿಭಾಗದಿಂದ ಒಂದು ವರ್ಷ ಹಿಂದೆಯಷ್ಟೇ ಎತ್ತಂಗಡಿ ಶಿಕ್ಷೆಗೆ ಗುರಿಯಾಗಿದ್ದ ಆಶಿತ್ ಮೋಹನ್ ಪ್ರಸಾದ್ಅವರನ್ನು ಮತ್ತೆ ಅದೇ ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಡಿವೈಎಸ್ ಪಿ ಎಂ.ಕೆ ಗಣಪತಿ ಪ್ರಕರಣದಲ್ಲಿ ಮೂರನೇಆರೋಪಿ ಹೆಸರಿಸಲಾಗಿದ್ದ ಪ್ರಸಾದ್ ಅವರನ್ನು 2016 ಜುಲೈನಲ್ಲಿ ವರ್ಗಾವಣೆ ಮಾಡಲಾಗಿತ್ತು. ಈ ಹುದ್ದೆಗೆ ಎಂ.ಎನ್ ರೆಡ್ಡಿಅವರನ್ನು ಸರ್ಕಾರ ನೇಮಿಸಿತ್ತು. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ನಡೆದ ಕೋಮುಗಲಭೆ ಹಾಗೂ ಜೈಲು ಲಂಚ ಪ್ರಕರಣದಲ್ಲಿ ಗೃಹಇಲಾಖೆಗೆ ಸೂಕ್ತ ಮಾಹಿತಿ ಒದಗಿಸಲು ವಿಫಲಾಗಿದ್ದರು ಎಂಬ ಕಾರಣಕ್ಕೆ ರೆಡ್ಡಿ ಅವರನ್ನು ಎತ್ತಂಗಡಿ ಮಾಡಿ ಅಮೃತ್ ಪಾಲ್ ಅವರನ್ನು ಜುಲೈ ೧೭ರಂದು ನೇಮಿಸಲಾಗಿತ್ತು.
Comments