ಸ್ವಾತಂತ್ರ ದಿನಾಚರಣೆ ಭಾಷಣಕ್ಕಾಗಿ ಪ್ರಧಾನಿಗೆ ಸಲಹೆ ನೀಡಿ

ನವದೆಹಲಿ: ಆಗಸ್ಟ್ ೧೫ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರ ಸರ್ಕಾರ ಈಗಿನಿಂದಲೇ ಭರದ ಸಿದ್ಧತೆ ನಡೆಸುತ್ತಿದ್ದು, ಕೆಂಪು ಕೋಟೆಯಲ್ಲಿ ಭಾಷಣ ಮಾಡುವ ಪ್ರಧಾನಿ ಮೋದಿ ತಮ್ಮ ಭಾಷಣದ ಕುರಿತು ಸಾರ್ವಜನಿಕರಿಂದ ಸಲಹೆಕೇಳಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ಆಗಸ್ಟ್ 15ರಂದು ಕೆಂಪು ಕೋಟೆ ಮೇಲೆ ನಿಂತು ಭಾಷಣ ಮಾಡುವ ನಾನು ಕೇವಲ ಮಾಧ್ಯಮವಾಗಿದ್ದು, ಅದು 125 ಕೋಟಿ ಭಾರತೀಯರ ಧ್ವನಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
Comments