ಅಬ್ದುಲ್ ಕಲಾಂ ಮುಸ್ಲಿಂರಲ್ಲ, ಅವರ ಹತ್ತಿರ ಭಗವದ್ಗೀತೆ ಇಟ್ಟರೆ ತಪ್ಪಿಲ್ಲ

ಚೆನ್ನೈ : ತಮಿಳುನಾಡಿನ ರಾಮೇಶ್ವರ್ ದ ಕಲಾಂ ಅವರ ಹುಟ್ಟೂರು ಬಳಿ ಸ್ಥಾಪಿಸಲಾಗಿರುವ ಸ್ಮಾರಕದಲ್ಲಿ ಕಲಾಂ ಪ್ರತಿಮೆ ಪಕ್ಕಭಗವದ್ಗೀತೆ ಇಟ್ಟ ಕುರಿತು ವಿವಾದ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ತಮಿಳುನಾಡು ದೋಹಿದ್ ಜಮಾತ್ ಈ ಹೇಳಿಕೆ ನೀಡಿದೆ.
ಮಾಜಿ ರಾಷ್ಟ್ರಪತಿಗಳು , ಎಪಿಜೆ ಅಬ್ದುಲ್ ಕಲಾಂ ಮುಸ್ಲಿಂರಲ್ಲ, ಅವರ ಪ್ರತಿಮೆ ಬಳಿ ಭಗವದ್ಗೀತೆ ಇಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದು ತಮಿಳುನಾಡು ತೋಹಿದ್ ಜಮಾತ್ ಸಂಸ್ಥಾಪಕ ಪಿ ಜೈನುಲ್ ಅಭಿದ್ದೀನ್ ಹೇಳಿದರು. ಸೇಲಂನಲ್ಲಿ ಮಾತನಾಡಿರುವ ಜೈನುಲ್ ಅಬಿದ್ದೀನ್ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಅಂತಾ ಯಾರು ಪರಿಗಣಿಸಿಲ್ಲ, ಅವರು ಹೆಸರು ಮಾತ್ರವೇ ಅಬ್ದುಲ್ ಕಲಾಂ ಆಗಿತ್ತು. ಅವರು ಎಂದೂ ಇಸ್ಲಾಂ ಧರ್ಮವನ್ನು ಪಾಲಿಸಿರಲಿಲ್ಲ. ಅನೇಕ ಮುಸ್ಲಿಂಮೇತರ ಆಚರಣೆಗಳಷ್ಟೇ ಅನುಸರಿಸಿದ್ದರು ಎಂದು ಹೇಳಿದ್ದಾರೆ.
Comments