ಔರಂಗಾಬಾದ್ ಏರಪೋರ್ಟ್ ನಲ್ಲಿ ತಸ್ಲೀಮಾಗೆ ಘೇರಾವ್
ಔರಂಗಾಬಾದ್ : ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ದೆಹಲಿ ಇಂದ ಔರಂಗಬಾದ್ ಗೆ ತಲುಪಿದಾಗ ಅವರು ದಿಢೀರನೆ ಮುಂಬೈಗೆ ವಾಪಸ್ಸಾಗಬೇಕಾಯಿತು. ಏರಪೋರ್ಟ್ ನಲ್ಲಿ ತಸ್ಲೀಮಾ ಬಂದಿಳಿದಾಗ ಘೇರಾವ್ ಹಾಕಿದ ಹಲವು ಮಂದಿ, ಈ ವೇಳೆ ತಸ್ಲೀಮ್ ವಿರುದ್ಧ ಘೋಷಣೆಗಳನ್ನು ಕೂಗಿದರು. 'ತಸ್ಲೀಮಾ ಗೊ ಬ್ಯಾಕ್' ಎಂಬ ಘೋಷ ವಾಕ್ಯಗಳ ಮೂಲಕ ಅಲ್ಲಿ ನೆರದಿದ್ದ ಜನರು ವಿರೋಧ ವ್ಯಕ್ತಪಡಿಸಿದರು.
ಅವರನ್ನು ವಾಪಸ್ ಹೋಗುವಂತೆ ಪ್ರತಿಭಟನೆ ಕೂಡ ನಡೀತು. ನಂತರ ತಸ್ಲೀಮಾ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು. ಪೊಲೀಸ್ ಮೂಲಗಳ ಪ್ರಕಾರ, ತಸ್ಲೀಮಾ ಕೆಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಗಮಿಸಿದ್ದರು. ಅಜಂತಾ ಹಾಗೂ ಎಲ್ಲೋರಾ ಐತಿಹಾಸಿಕ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದಿದ್ದರು ಎನ್ನಲಾಗಿದೆ
Comments