ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ನಂಬರ್-೧ !
ದೆಹಲಿ ಹಾಗೂ ಮುಂಬೈ ತರುವಾಯ ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ರಾಷ್ಟ್ರದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆಎಂದು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ. ಮೇಘನಾಥ್ ಚೌಹಾಣ್ ತಿಳಿಸಿದ್ದಾರೆ. ಅರಮನೆ ಮೈದಾನ್ ದಲ್ಲಿ ಆದಾಯ ತೆರಿಗೆ ಇಲಾಖೆ ಶನಿವಾರದಂದು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ತೆರಿಗೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿರುವ ಅವರು, ದೇಶದ ಅಭಿವೃದ್ಧಿ ಯಲ್ಲಿ ಭಾಗವಹಿಸಲು ಎಲ್ಲಾ ತೆರಿಗೆದಾದರರು ಕೈ ಜೋಡಿಸಬೇಕು. ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು. ಇದರಿಂದ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
2016-17ನೇ ಸಾಲಿನ ಕರ್ನಾಟಕ ಮತ್ತು ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆಯ 1.04 ಲಕ್ಷ ಕೋಟಿ ತೆರಿಗೆ ಸಂಗ್ರಹವಿತ್ತು.ಈ ಬಾರಿ ಇನ್ನು ಹೆಚ್ಚಳ ವಾಗುವ ನಿರೀಕ್ಷೆ ಇದ್ದು, ತೆರಿಗೆದಾರರಿಗೆ ಅರಿವು ಮೂಡಿಸುವ ಸಂಬಂಧ ಎಚ್.ಎ.ಎಲ್ ಮಣಿಪಾಲ್ ಆಸ್ಪತ್ರೆ ಸೇರಿದಂತೆ ವಿವಿಧ ಸಂಸ್ಥೆಗಳು ಇಲಾಖೆಯೊಂದಿಗೆ ಕೈ ಜೋಡಿಸಿವೆ. ಸರ್ಕಾರಿ ಕಚೇರಿಗಳಲ್ಲಿಯೂ ವಿಶೇಷ ಕೌಂಟರ್ ತೆರೆಯಬೇಕಾಗಿದ್ದು, ಇತರೆ ಸಮಸ್ಯೆಗಳ ಕುರಿತು ಐಟಿ ಅಧಿಕಾರಿಗಳಿಂದ ತೆರಿಗೆದಾರರು ತಾಂತ್ರಿಕ ದೋಷ ಮತ್ತು ಇತರೆ ಸಮಸ್ಯೆಗಳ ಕುರಿತು ಐಟಿ ಅಧಿಕಾರಿಗಳಿಂದ ತೆರಿಗೆದಾರರು ಮಾಹಿತಿ ಪಡೆದುಕೊಂಡು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದರು.
Comments