ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಲಹೆ
ನವದೆಹಲಿ: ಇತ್ತೀಚೆಗೆ ರೈಲುಗಳಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಕಳಪೆ ಗುಣಮಟ್ಟದ ಆಹಾರ ವಿತರಣೆ ಮಾಡಲಾಗುತ್ತದೆ ಎಂಬ ದೂರುಗಳು ಬಂದ ಕಾರಣಕ್ಕಾಗಿ ರೈಲ್ವೆ ಇಲಾಖೆ ಪ್ರಯಾಣಿಕರಿಗೊಂದು ಸಲಹೆ ನೀಡಿದೆ.
ಮನೆಯಿಂದಲೇ ಆಹಾರ ತೆಗೆದುಕೊಂಡು ಬರುವಂತೆ ಸೂಚನೆ ನೀಡಿದೆ. ರೈಲುಗಳಲ್ಲಿ ಅಡುಗೆ ಕೋಚ್ ಗಳನ್ನು ನವೀಕರಿಸುವ ಪ್ರಕ್ರಿಯೆ ಗೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗಲಿದ್ದು, ಆದ್ದರಿಂದ ಪ್ರಯಾಣಿಕರು ಮನೆಯಿಂದಲೇ ಆಹಾರ ತೆಗೆದುಕೊಂಡು ಬರುವುದು
ಸೂಕ್ತ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ ಮಿತ್ತಲ್ ಹೇಳಿದರು.
ರೈಲುಗಳಲ್ಲಿ ನೀಡಲಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದು ಎಂದು ಇತ್ತೀಚೆಗೆ ಸಿಎಜಿ ವರದಿ ಸಲ್ಲಿಸಿತ್ತು. ಹೌರಾ ದೆಹಲಿ ಎಕ್ಸಪ್ರೆಸ್ ರೈಲಿನಲ್ಲಿ ಇತ್ತೀಚೆಗೆ ಪ್ರಯಾಣಿಕರೊಬ್ಬರಿಗೆ ಪೂರೈಸಲಾದ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಕೇಟರಿಂಗ್ ಕಂಪನಿ ಪೂರೈಸಿದ್ದ ಆಹಾರವನ್ನು ಪ್ರಯಾಣಿಕರೊಬ್ಬರು ಸೇವಿಸಿದ್ದರು. ಹಲ್ಲಿ ಇರುವುದು ಅವರಿಗೆ ತಿಳಿದಿರಲಿಲ್ಲ.
ಆದರೆ ಸ್ವಲ್ಪ ಹೊತ್ತಿಲಲ್ಲಿ ಅನಾರೋಗ್ಯ ಉಂಟಾಯಿತು ಎಂದು ಸಹ ಪ್ರಯಾಣಿಕರಾದ ಮೇಘನಾ ಸಿನ್ಹಾ ಎಂಬುವರು ಟ್ವೀಟ್ ಮಾಡಿದ್ದರು, ಬಳಿಕ ಈ ಬಗ್ಗೆ ರೈಲ್ವೆ ಇಲಾಖೆ ಕಳಪೆ ಆಹಾರ ಪೂರೈಸಿದ್ದ ಆರ್.ಕೆ ಅಸೋಸಿಯೇಟ್ಸ್ ಕೇಟರಿಂಗ್ ಸಂಸ್ಥೆ ಜತೆಗಿನ ಒಪ್ಪಂದ ವನ್ನು ರದ್ದುಗೊಳಿಸಿತ್ತು. ಇಂಥ ಕೆಲವು ಪ್ರಕರಣಗಳು ಇತ್ತೀಚೆಗೆ ನಡೆದಿರುವುದು ರೈಲ್ವೆ ಇಲಾಖೆಯನ್ನುತೀವ್ರ ಮುಜುಗರಕ್ಕೀಡು ಮಾಡಿವೆ.
Comments