ರಾಜ್ಯದಲ್ಲಿ ಬರದ ಛಾಯೆ, ಮಳೆ ಕೊರತೆ

30 Jul 2017 12:31 PM | General
902 Report

ಹುಬ್ಬಳ್ಳಿ: ಆಲಮಟ್ಟಿ ಜಲಾಶಯ ಹೊರತುಪಡಿಸಿ ಫಟಪ್ರಭಾ, ಮಲಪ್ರಭಾ, ತುಂಗಭದ್ರಾ ಹಾಗೂ ಸೂಪಾ ಜಲಾಶಯಗಳು ಭರ್ತಿಯಾಗಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಈ ಬಾರಿಯೂ ನೀರು ಸಂಗ್ರಹ ಆಗದಿರುವುದರಿಂದ ಬರದ ಛಾಯೆ ಆವರಿಸಿದೆ.

ಧಾರವಾಡ, ಬೆಳಗಾವಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಹಾಗಾಗಿ ಕೃಷಿ ಚಟುವಟಿಗೆ ಕುಂಠಿತವಾಗಿದೆ. ಮಲಪ್ರಭಾ, ಘಟಪ್ರಭಾ ಆಲಮಟ್ಟಿ ಜಲಾಶಯಗಳಲ್ಲಿ ಭರ್ತಿಗೆ ಕೇವಲ ಒಂದು ಅಡಿ ಬಾಕಿ ಇದೆ. 519.25 ಮೀಟರ್ ವರೆಗೆ ನೀರು ಇದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸ ಮೂಡಿಸಿದೆ. ಮಲಪ್ರಭಾ, ಘಟಪ್ರಭಾ ಹಾಗೂ ಸೂಪಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚು ನೀರು ಸಂಗ್ರಹವಾಗಿದೆ. ಆದರೆ ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಈ ವರ್ಷವು ಜಲಾಶಯಗಳಲ್ಲಿ ಭರ್ತಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಘಟಪ್ರಭಾ ಜಲಾಶಯದ ನೀರಿನ ಸಂಗ್ರಹದ ಗರಿಷ್ಠ ಮಟ್ಟ 2175 ಅಡಿ (51 ಟಿಎಂಸಿ ಅಡಿ) ಇದ್ದು, ಶನಿವಾರದವರೆಗೆ 2145 ಅಡಿಯವರೆಗೆ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2134 ಅಡಿಯವರೆಗೆ ನೀರು ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ 11 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. ಆದರೆ ಭರ್ತಿಗೆ ಇನ್ನು 30 ಅಡಿ ನೀರು ಹೆಚ್ಚಿಗೆ ಬಂದಿದೆ. ಆದರೆ ಭರ್ತಿಗೆ ಇನ್ನು 26 ಅಡಿ ಬಾಕಿ ಇದೆ.

ತುಂಗಭದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟ 1633 ಅಡಿ ಇದ್ದು, ಶನಿವಾರದವರೆಗೆ 1610 ಅಡಿವರೆಗೆ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಜಲಾಶಯಗಳಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಶನಿವಾರದಂದು ಕೇವಲ 36 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

Edited By

venki swamy

Reported By

Sudha Ujja

Comments