ಆಗಸ್ಟ್ 15ರೊಳಗೆ ಅನಿಲ ಭಾಗ್ಯಕ್ಕೆ ಚಾಲನೆ
ಮಂಗಳುರು: ರಾಜ್ಯ ಸರ್ಕಾರದ ವತಿಯಿಂದ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಹಾಗೂ ಸ್ಟವ್ ನೀಡುವ ಯೋಜನೆ ಅನಿಲ ಭಾಗ್ಯಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಮಾರ್ಗಸೂಚಿ ಪ್ರಕಟವಾಗಿದೆ. ಆಗಸ್ಟ್ 15ರೊಳಗೆ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನುಹೊಂದಿದ್ದು ಅನಿಲ ಸಂಪರ್ಕ ಹೊಂದಿರದವರು ಸಿಎಂ ಅನಿಲಭಾಗ್ಯ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಇವರಿಗೆ ಅಡುಗೆ ವಿತರಕರ ಮುಖಾಂತರ ಅನಿಲ ಸಂಪರ್ಕ ವನ್ನು ನೀಡಿ ಅನಂತರ ಅಡುಗೆ ಅನಿಲವಿತರಕರಿಗೆ ಖಜಾನೆ -2 ಮೂಲಕ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ ಎಂದರು.
ಅರ್ಜಿ ಪ್ರಕ್ರಿಯೆ ಹೀಗಿರಲಿದೆಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ 18 ವರ್ಷ ಮೇಲ್ಪಟ್ಟ ಮಹಿಳಾ ಸದಸ್ಯರು ಒಂದು ವೇಳೆ ಮಹಿಳಾ ಸದಸ್ಯರು ಇಲ್ಲದ ಪಕ್ಷದಲ್ಲಿ 18 ವರ್ಷ ಮೇಲ್ಪಟ್ಟ ಪುರುಷ ಸದಸ್ಯರು ಸಂಬಂಧಪಟ್ಟ ಖಾಸಗಿ ಫ್ರಾಂಚೈಸಿ ತಾಲೂಕು ಕಚೇರಿ, ಗ್ರಾ.ಪಂ , ಜನಸ್ನೇಹಿ ಕೇಂದ್ರ ಕರ್ನಾಟಕ ವನ್ ಮುಂತಾದ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಕುಟುಂಬದ ಎಲ್ಲಾ ಸದಸ್ಯರು ಆಧಾರ ಸಂಖ್ಯೆಯನ್ನು ಸಿಎಂ ಅನಿಲಭಾಗ್ಯ ಯೋಜನೆ ತಂತ್ರಾಶದಲ್ಲಿ ನೋಂದಾಯಿಸಿ ತೈಲ ಕಂಪನಿ ವೆಬ್ ಸೈಟ್ ಮುಖಾಂತರ ಎಲ್ಲಾ ಸದಸ್ಯರು ಅಡುಗೆ ಅನಿಲ ಸಂಪರ್ಕ ಹೊಂದದೆ ಇರುವ ಬಗ್ಗೆ ಪರಿಶೀಲಿಸಿ ಇಲಾಖೆಯಿಂದ ಪರಿಶೀಲನೆ ಮಾಡುವ ನಿಬಂಧನೆಗೊಳಪಟ್ಟ ಅರ್ಜಿದಾರರಿಗೆ ಹಿಂಬರಹ ನೀಡಲಾಗುತ್ತದೆ. ಅರ್ಜಿದಾರರು ತಮ್ಮ ಆಯ್ಕೆಯ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಸಚಿವರು ವಿವರಿಸಿದರು.
Comments