ಹಣ್ಣು, ತರಕಾರಿ ಕೃಷಿ ಉತ್ಪನ್ನ ಕ್ಷೇತ್ರಕ್ಕೆ ಐಟಿಸಿ ಪ್ರವೇಶ

ಕೋಲ್ಕತ್ತ: ವೈವಿಧ್ಯಮಯ ವಹಿವಾಟು ನಡೆಸುತ್ತಿರುವ ಉದ್ಯಮ ಸಂಸ್ಥೆ ಐಟಿಸಿ, ಹಣ್ಣು ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ವಹಿವಾಟು ಪ್ರವೇಶಿಸಲು ನಿರ್ಧರಿಸಿದೆ. ಔಷಧಿಯ ಸಸ್ಯಗಳ ಕೃಷಿ ಚಟುವಟಿಕೆಗಳಲ್ಲಿ ಬಂಡವಾಳ ತೊಡಗಿಸಿವುದನ್ನು ಸಂಸ್ಥೆಯು ಪರಿಶೀಲಿಸುತ್ತಿದೆ.
ಹಣ್ಣು ತರಕಾರಿ ಮತ್ತು ಶೀರ್ಘವಾಗಿ ಕೊಳೆಯುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರವೇಶಿಸಲಿದೆ. ಇದರಿಂದ ಕೃಷಿ ತ್ಯಾಜ್ಯ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೃಷಿಕರಿಗೂ ಪ್ರಯೋಜನ ದೊರೆಯಲಿದೆ ಎಂದು ಅಧ್ಯಕ್ಷ ವೈ.ಸಿ ದೇವೇಶ್ವರ್ ಅವರು ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ತಾಜಾ ಹಣ್ಣು ತರಕಾರಿ ಗ್ರಾಹಕರಿಗೆ ಪೂರೈಸುವುದರಿಂದ ಕೃಷಿಕರು ವೈವಿಧ್ಯಮಯ ಬೆಳೆ ಬೆಳೆಯಲು ನೆರವಾಗಲಿದೆ ಎಂದು ಹೇಳಿದ್ದಾರೆ.
Comments