ಎನ್. ಧರ್ಮಸಿಂಗ್ ಪಂಚಭೂತಗಳಲ್ಲಿ ಲೀನ

ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ನೆಲೋಗಿ ಗ್ರಾಮದ ಜಮೀನಿನಲ್ಲಿ ಹಿಂದೂ ರಜಪೂತ ಸಂಪ್ರದಾಯದಂತೆ ಎನ್ ಧರ್ಮಸಿಂಗ್ ಅಂತಿಮ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಗಿದೆ.ಕಲಬುರಗಿ ನೆಲೋಗಿ ಗ್ರಾಮದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಅಂತ್ಯ ಸಂಸ್ಕಾರ ನಡೆದಿದೆ.
ಧರ್ಮಸಿಂಗ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ12ಗಂಟೆಯವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು, ಧರ್ಮಸಿಂಗ್ ಒಡನಾಡಿಗಳು ಬಂಧುಗಳು, ಸಚಿವರಾದ ಯು.ಟಿ ಖಾದರ್, ಮಾಜಿ ಸಚಿವ ಗೋವಿಂದ್ ಕಾರಜೋಳ, ರೇವುನಾಯಕ ಬೆಳಮಗಿ, ಶಾಸಕರಾದ ಬಾಬುರಾವ್ ಚಿಂಚನಸೂರ, ಖಮರುಲ್ ಇಸ್ಲಾಂ, ಮಾಲೀಕಯ್ಯ ಗುತ್ತೇದಾರ. ದತ್ತಾತ್ರೇಯ ಪಾಟೀಲ್ ರೇವೂರ್, ಇಕ್ಬಾಲ್ ಅಹಮ್ಮದ್ ಸರಡಗಿ ನಮನ ಸಲ್ಲಿಸಿದರು. ಕಾಂಗ್ರೆಸ್ ಸೇವಾ ದಳದ ಸದಸ್ಯರು ಗೌರವ ವಂದನೆ ಸಲ್ಲಿಸಿದರು.
Comments