ನನಸಾಯ್ತು ಅಬ್ದುಲ್ ಕಲಾಂ ಸ್ಮಾರಕ

27 Jul 2017 12:42 PM | General
768 Report

 

ರಾಮೇಶ್ವರಂ: ಪ್ರಧಾನಿ ಮೋದಿ ಇವತ್ತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮಾರಕ ಲೋಕಾರ್ಪಣೆ ಮಾಡಲಿದ್ದಾರೆ. ದೇಶ ಕಂಡ ಮಹೋನ್ನತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಎರಡನೇ ಪುಣ್ಯ ತಿಥಿ ಇಂದು ಅವರ ಹುಟ್ಟೂರು ರಾಮೇಶ್ವರದ ಸಮಾಧಿ ಸ್ಥಳದಲ್ಲಿ ಸ್ಮಾರಕ ಲೋಕಾರ್ಪಣೆ ಗೊಳ್ಳಲಿದೆ.ಡಿಆರ್ ಡಿಒ ವಿಶೇಷವಾಗಿ ವಿನ್ಯಾಸ ಮಾಡಿದ ರಾಷ್ಟ್ರೀಯ ಧ್ವಜ ಮತ್ತು ಕಲಾಂ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಅನಾವರಣಗೊಳಿಸಲಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಇದೇ ವೇಳೆ ‘ಕಲಾಂ ಸೈನ್ಸ್ ವಿಷನ್ 2020’ ಎನ್ನುವ ಬಸ್ ಒಂದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಇದು ದೇಶದಾದ್ಯಂತ ಸಂಚರಿಸಿ ಕಲಾಂ ಅವರ ಕನಸುಗಳನ್ನು, ಸಾಧನೆಗಳನ್ನು ಪ್ರಚುರಪಡಿಸಿ ನಂತರ ಅವರ ಜನುಮದಿನವಾದ ಅಕ್ಟೋಬರ್ 15 ರಂದು ರಾಷ್ಟ್ರಪತಿ ಭವನ ತಲುಪಲಿದೆ.

Edited By

Suhas Test

Reported By

Sudha Ujja

Comments