ವಿದ್ಯುತ್ ಉಳಿತಾಯ : ಕರ್ನಾಟಕಕ್ಕೆ 2ನೇ ಸ್ಥಾನ ಲಭಸಿದೆ
ಕೇಂದ್ರ ಸರಕಾರದೊಡನೆ ಕರ್ನಾಟಕವೂ ಸೇರಿದಂತೆ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಉದಯ್ (Ujwal DISCOM Assurance Yojana) ಯೋಜನೆಗೆ ಒಪ್ಪಂದ ಮಾಡಿಕೊಂಡ ಮೇಲೆ ವಿದ್ಯುತ್ ತಯಾರಿಕೆಯಲ್ಲಿ ಆಗುತ್ತಿದ್ದ ನಷ್ಟವನ್ನು ಗಣನೀಯವಾಗಿ ತಗ್ಗಿಸಿಕೊಂಡಿವೆ.ಈ ಯೋಜನೆಯಡಿಯಲ್ಲಿ ಕರ್ನಾಟಕದ ಬೆಸ್ಕಾಂ (ಬೆಂಗಳೂರು), ಹೆಸ್ಕಾಂ (ಹುಬ್ಬಳ್ಳಿ, ಗೆಸ್ಕಾಂ (ಕಲಬುರಗಿ), ಮೆಸ್ಕಾಂ (ಮಂಗಳೂರು) ಮತ್ತು ಎಸ್‌ಇಎಸ್ಸಿ (ಚಾಮುಂಡೇಶ್ವರಿ) ಕಂಪನಿಗಳು ಬರುತ್ತಿವೆ. ಈ ಎಲ್ಲ ಕಂಪನಿಗಳು ಕಳೆದೊಂದು ವರ್ಷದಲ್ಲಿ ವಿದ್ಯುತ್ ಪೂರೈಕೆ, ಉಳಿತಾಯ, ಸಂಪರ್ಕದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ ಮತ್ತು ಉಳಿತಾಯವನ್ನೂ ಮಾಡಿವೆ.
ಹಾಗೆಯೆ, ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಹರ್ಯಾಣ ಮುಂತಾದ ರಾಜ್ಯಗಳು ಕೂಡ ವಾರ್ಷಿಕ ನಷ್ಟವನ್ನು ಈ ಉದಯ್ ಯೋಜನೆಯಡಿ ಸಾಕಷ್ಟು ತಗ್ಗಿಸಿಕೊಂಡಿವೆ. ಹರ್ಯಾಣ ರಾಜ್ಯ ಶೇ.90ರಷ್ಟು ನಷ್ಟವನ್ನು ತಗ್ಗಿಸಿಕೊಂಡು ಅದ್ಭುತ ಪ್ರಗತಿಯನ್ನು ಕಂಡಿದೆ.ಉದಯ್ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಗುಜರಾತ್ ಗೆ ಸಂದಿದೆ. ನಂತರ ಮಹಾರಾಷ್ಟ್ರ, ಪಾಂಡಿಚೇರಿ, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ತ್ರಿಪಾರಾ ಪಡೆದುಕೊಂಡಿವೆ. ತಮಿಳುನಾಡು ಕಡೆಯ ಸ್ಥಾನದಲ್ಲಿದೆ.
Comments