ಏನ್ ಕಾಲ ಬಂತಪ್ಪ ಒಂದು ಕಪ್ ಟೀಗೆ ಒಂದು ಸಿಗರೇಟ್ ಪ್ರೀ !!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಂಥಾ ಅಪಾಯಕಾರಿ ಬೆಳವಣಿಗೆ ,ಸಿಗರೇಟ್ ಕಂಪನಿಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಅಪಾಯಕಾರಿ ಪ್ರಚಾರಗಳಲ್ಲಿ ತೊಡಗಿಕೊಂಡಿದ್ದಾರೆ. ಜನರನ್ನು ಅಕರ್ಷಿಸುವ ಸಲುವಾಗಿ ಟೀ ಸ್ಟಾಲ್ ಗಳಲ್ಲಿ ಟೀ ತೆಗೆದುಕೊಂಡರೆ ಸಿಗರೇಟ್ ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯಿಂದಾಗಿ ಯುವಕರು, ಬಾಲಕರು ಮಾತ್ರವಲ್ಲ, ಸಿಗರೇಟ್ ಅಭ್ಯಾಸವಿಲ್ಲದವರೂ ಸಿಗರೇಟ್ ಚಟಕ್ಕೆ ತುತ್ತಾಗಲು ಕಾರಣವಾಗಿದೆ. ಬೆಂಗಳೂರು ದಕ್ಷಿಣ ಡಿಸಿಪಿ ವಿಭಾಗ ಮತ್ತು ಪಶ್ಚಿಮ ವಿಭಾಗದ ಶಾಲಾ ಕಾಲೇಜುಗಳ ಆವರಣದಲ್ಲಿ ಈ ರೀತಿ ಅನಾರೋಗ್ಯಕರ ಸಿಗರೇಟ್ ಜಾಹೀರಾತು ಮಾರಾಟ ಜಾಲ ಕಂಡು ಬಂದಿದ್ದು, ಪೊಲೀಸರು ಪ್ರಕರಣಗಳನ್ನು ಕೂಡ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
ಫಿಲಿಪ್ ಮೋರಿಸ್ ಕಂಪನಿಯ ಮೆಲ್ಬೋರೋ ಬ್ರ್ಯಾಂಡ್ ನ ಸಿಗರೇಟ್ ಮಾರಾಟಗಾರರು, ಏಜೆನ್ಸಿಗಳು ಈ ರೀತಿ ಅಪಾಯಕಾರಿ ಪೈಪೋಟಿಗಳಿಗೆ ಇಳಿದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.
Comments